* ಭಾರತೀಯ ಕಂದಾಯ ಸೇವೆಯ (IRS) ಅಧಿಕಾರಿಯಾದ ಸುನೀಲ್ ಕುಮಾರ್ ಯಾದವ್ ಅವರನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ನಿರ್ದೇಶಕರಾಗಿ ಏಪ್ರಿಲ್ 26 ರಂದು (ಶುಕ್ರವಾರ) ನೇಮಕ ಮಾಡಲಾಗಿದೆ. * ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಹೊರಡಿಸಿದ ಆದೇಶದ ಪ್ರಕಾರ ಯಾದವ್ ಅವರು ಹುದ್ದೆಯ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಥವಾ ಮುಂದಿನವರೆಗೆ ಕೇಂದ್ರ ಸಿಬ್ಬಂದಿ ಯೋಜನೆಯಡಿ ಹುದ್ದೆಗೆ ನೇಮಕಾತಿಗೆ ಆಯ್ಕೆಯಾಗಿದ್ದಾರೆ. * ವಸತಿ ಮತ್ತು ನಗರ ವ್ಯವಹಾರ ಮತ್ತು ಸಚಿವಾಲಯದಲ್ಲಿ ಸುನಿಲ್ ಕುಮಾರ ಯಾದವ್ ಅವರನ್ನು ಹೊಸ ಪಾತ್ರವನ್ನು ವಹಿಸಿಕೊಳ್ಳಲು ಅನುವು ಮಾಡಿಕೊಡಲು ತಕ್ಷಣವೆ ಪ್ರಸ್ತುತ ಕರ್ತವ್ಯಗಳಿಂದ ಮುಕ್ತಗೊಳಿಸಬೇಕೆಂದು DoPT ಆದೇಶವನ್ನು ಹೊರಡಿಸಿದೆ.* ಸುನಿಲ್ ಕುಮಾರ್ ಯಾದವ್ ಅವರನ್ನು MoHUA ಯ ನಿರ್ದೇಶಕರಾಗಿ ನೇಮಕ ಮಾಡಿರುವುದು ಸುಸ್ಥಿರ ನಗರಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಮತ್ತು ದೇಶಾದ್ಯಂತದ ನಗರಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಚಿವಾಲಯದ ನಿರಂತರ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. * ಸುನೀಲ್ ಕುಮಾರ್ ಯಾದವ್ ಅವರು ವಸತಿ ನಗರ ಯೋಜನೆಗಳ ಕುರಿತು  ಮೂಲಸೌಕರ್ಯದ ಅಭಿವೃದ್ಧಿಯನ್ನು ಹೆಚ್ಚಿಸಲು ಮತ್ತು ಸ್ಮಾರ್ಟ್ ಸಿಟಿ ಉಪಕ್ರಮಗಳ  ಸೇರಿದಂತೆ ಎಲ್ಲ ರೀತಿಯ ನಗರ ಅಭಿವೃದ್ಧಿಯ ಮೇಲೆ ವಿವಿಧ ಅಂಶಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.