* ಶ್ರೀಲಂಕಾ ತನ್ನ 209 ಮಿಲಿಯನ್ ಡಾಲರ್ ಮೊತ್ತದ ಚೀನಾ ನಿರ್ಮಿತ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಎರಡು ಭಾರತೀಯ ಮತ್ತು ರಷ್ಯಾದ ಕಂಪನಿಗಳಿಗೆ ಹಸ್ತಾಂತರಿಸಲಿದೆ ಎಂದು ಏಪ್ರಿಲ್ 26 ರಂದು (ಶುಕ್ರವಾರ) ಕ್ಯಾಬಿನೆಟ್ ಹೇಳಿಕೆ ತಿಳಿಸಿದೆ, * ಚೀನಾದ ಬ್ಯಾಂಕ್ ಸಾಲದ ಮೂಲಕ ಹಣಕಾಸು ಒದಗಿಸಿದ ಶ್ರೀಲಂಕಾದ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಮುಂದಿನ 30 ವರ್ಷಗಳವರೆಗೆ ಭಾರತ ಮತ್ತು ರಷ್ಯಾದ ಸಂಸ್ಥೆಗಳಿಗೆ ನೀಡಲಾಗಿದೆ.* ಭಾರತ ಮೂಲದ ಶೌರ್ಯ ಏರೋನಾಟಿಕ್ಸ್ (ಪ್ರೈ) ಲಿಮಿಟೆಡ್ ಮತ್ತು ರಷ್ಯಾದ ಏರ್‌ಪೋರ್ಟ್ಸ್ ಆಫ್ ರೀಜನ್ಸ್ ಮ್ಯಾನೇಜ್‌ಮೆಂಟ್ ಕಂಪನಿಗೆ ಹಸ್ತಾಂತರಿಸಲಾಗುವುದು ಎಂದು ಕ್ಯಾಬಿನೆಟ್ ಹೇಳಿಕೆಯಲ್ಲಿ ಒಪ್ಪಂದದ ಮೌಲ್ಯವನ್ನು ಉಲ್ಲೇಖಿಸದೆ ತಿಳಿಸಿದೆ.* ಚೀನಾ ಮೂಲದ ಎಕ್ಸಿಂ ಬ್ಯಾಂಕ್ ಆಫ್ ಚೀನಾದಿಂದ 1,583 ರೂ. ಬಡ್ಡಿ ಸಾಲದ ರೂಪದಲ್ಲಿ ನೆರವು ಒಳಗೊಂಡಂತೆ, ಹಾಗೂ 1,742 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನುಹೊಂದಿರುವ ಈ ವಿಮಾನನಿಲ್ದಾಣವನ್ನು ನಿರ್ಮಿಸಲಾಗಿದೆ.