* ಜೂನ್‌ನಿಂದ ಭಾರತ–ಚೀನಾ ಗಡಿ ವ್ಯಾಪಾರ ಪುನಾರಂಭವಾಗುತ್ತಿರುವುದು ಉಭಯ ದೇಶಗಳ ಸಂಬಂಧಗಳಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಈ ಗಡಿ ವ್ಯಾಪಾರವು ಹಿಮಾಚಲಪ್ರದೇಶದ ಕಿನ್ನೌರ್ ಜಿಲ್ಲೆಯ ಶಿಪ್ತಿ ಲಾ ಎಂಬ ತಂತ್ರತ್ಮಕ ಪಾಸ್‌ನಲ್ಲಿ ಮತ್ತೆ ಆರಂಭಗೊಳ್ಳಲಿದೆ. ಇದರಿಂದ ಗಡಿ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಗುವ ನಿರೀಕ್ಷೆಯಿದೆ.* ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪದಲ್ಲಿರುವ ನಮ್ಮಿಯಾ–ಶಿಷ್ಠಿಲಾದ ಲ್ಯಾಂಡ್ ಕಸ್ಟಮ್ಸ್ ಸ್ಟೇಷನ್ (ಎಲ್‌ಸಿಎಸ್) ಮೂಲಕ ವಿನಿಮಯ ಆಧಾರಿತ (ಬಾರ್ಟರ್) ವ್ಯಾಪಾರ ನಡೆಯಲಿದೆ. ವ್ಯಾಪಾರಿಗಳ ಜೊತೆಗೆ ಪ್ರವಾಸಿಗರಿಗೆ ಸಹ ಅನುಕೂಲವಾಗುವಂತೆ ಪಾಸ್ ಸಮೀಪ ಟ್ರೇಡ್ ಮಾರ್ಟ್ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಇದರಿಂದ ಸ್ಥಳೀಯ ಉದ್ಯೋಗಾವಕಾಶಗಳು ಹೆಚ್ಚಾಗುವ ಸಾಧ್ಯತೆ ಇದೆ.* ಆದರೆ ಈ ಹಂತದಲ್ಲಿ ಆಮದು–ರಫ್ತು ಸಂಪೂರ್ಣವಾಗಿ ಮುಕ್ತಗೊಳಿಸಲಾಗಿಲ್ಲ. ಕೇಂದ್ರ ವಾಣಿಜ್ಯ ಸಚಿವಾಲಯದ ಪ್ರಕಾರ, ಪ್ರಸ್ತುತ 20 ಉತ್ಪನ್ನಗಳನ್ನು ಮಾತ್ರ ಆಮದು ಮಾಡಿಕೊಳ್ಳಲು ಹಾಗೂ 36 ಉತ್ಪನ್ನಗಳನ್ನು ರಫ್ತು ಮಾಡಲು ಅವಕಾಶ ನೀಡಲಾಗಿದೆ. ಹಂತ ಹಂತವಾಗಿ ವ್ಯಾಪಾರದ ವಿಸ್ತರಣೆ ಮಾಡುವ ಉದ್ದೇಶವಿದ್ದು, ಭದ್ರತೆ ಹಾಗೂ ಆರ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.* ಗಡಿ ವ್ಯಾಪಾರದ ಪುನಾರಂಭವು ಭಾರತ–ಚೀನಾ ನಡುವಿನ ನಂಬಿಕೆ ನಿರ್ಮಾಣ, ಪ್ರಾದೇಶಿಕ ಅಭಿವೃದ್ಧಿ ಮತ್ತು ಗಡಿ ಪ್ರದೇಶಗಳ ಜನಜೀವನಕ್ಕೆ ಧನಾತ್ಮಕ ಪರಿಣಾಮ ಬೀರುವ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.