* ಹೊಚ್ಚಹೊಸ ವಂದೇ ಸಾಧಾರಣ ಪುಶ್-ಪುಲ್ ರೈಲು ಅಕ್ಟೋಬರ್ 29 ರಂದು ಮುಂಬೈನ ವಾಡಿ ಬಂದರ್ ಯಾರ್ಡ್ ಅನ್ನು ತಲುಪಿದೆ. ಇದು ಮುಂಬರುವ ವಾರದಲ್ಲಿ ಪ್ರಯೋಗಗಳಿಗೆ ಒಳಗಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.* ಈ ರೈಲಿನಲ್ಲಿ 22-ಬೋಗಿಗಳಿದ್ದು, 8 ಜನರಲ್ ಕೋಚ್, 2 ಲಗ್ಗೇಜ್ ಕೋಚ್ ಗಳಿದ್ದು, ಹಾಗೂ ನಾನ್-ಎಸಿ 3-ಟೈಯರ್ ಸ್ಲೀಪರ್ ರೈಲು ಪ್ರಯಾಣಿಕರಿಗೆ ಕೈಗೆಟುಕುವ ದರವನ್ನು ಒದಗಿಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. * ರೈಲು 1,800 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡು WAP5 ಇಂಜಿನ್‌ಗಳಿಂದ ಎಳೆಯಲಾಗುತ್ತದೆ, ಇದು 130 kmph ಅನ್ನು ತಲುಪುವ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.* ಅಕ್ಟೋಬರ್ 12 ರಂದು ಮಾಡಿದ ಪ್ರಕಟಣೆಯಲ್ಲಿ ರೈಲ್ವೆ ಮಂಡಳಿಯ ಕಾರ್ಯದರ್ಶಿ ಮಿಲಿಂದ್ ದೇವುಸ್ಕರ್, ಭಾರತೀಯ ರೈಲ್ವೇಯು ವಂದೇ ಭಾರತ್ ಸ್ಲೀಪರ್ ಕೋಚ್ ಮತ್ತು ವಂದೇ ಭಾರತ್ ಮೆಟ್ರೋಗಳನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ವರದಿ ಮಾಡಿದೆ.* ಚನ್ನೈನಲ್ಲಿರುವ ಭಾರತೀಯ ರೈಲ್ವೆಯ ಇಂಟಿಗ್ರಾಲ್ ಕೋಚ್ ಪ್ಯಾಕ್ಟರಿ (ಐಸಿ ಎಫ್) ನಲ್ಲಿ ವಂದೇ ಸಾಧಾರಣ ರೈಲು ತಯಾರಿಸಲಾಗಿದ್ದು, 65 ಕೋಟಿ ರೂ ರೈಲಿನ ಉತ್ಪಾದನಾ ವೆಚ್ಚ ಎಂದು ಅಧಿಕಾರಿಗಳು ತಿಳಿಸಿದ್ದಾರೆ.