Job Description: * ವಾಂಖೆಡೆ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಜೀವನಗಾಥೆಯನ್ನು ಸಾರುವ ಆಳೆತ್ತರದ ಪ್ರತಿಮೆಯನ್ನು ನವೆಂಬರ್ 1 ರಂದು ಲೋಕಾರ್ಪಣೆ ನಡೆಯಲಿದೆ. * ನವೆಂಬರ್ 1 ರಂದು ನಡೆಯುವ ಭಾರತ ಮತ್ತು ಶ್ರೀಲಂಕಾ ಮಧ್ಯೆ ವಿಶ್ವಕಪ್‌ ಟೂರ್ನಿಯ ಪಂದ್ಯ ನಡೆಯಲಿದ್ದು, ಏಪ್ರಿಲ್‌ನಲ್ಲಿ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸಚಿನ್‌ ಅವರ ಪ್ರತಿಮೆಯನ್ನು ವಾಂಖೆಡೆ ಕ್ರೀಡಾಂಗಣದೊಳಗೆ ಮುಂಬೈ ಕ್ರಿಕೆಟ್ ಸಂಸ್ಥೆ ನಿರ್ಮಿಸಿದೆ.* ಈ ಪ್ರತಿಮೆಯ ಲೋಕಾರ್ಪಣಾ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಖಜಾಂಚಿ ಆಶಿಶ್ ಶೆಲಾರ್, ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಮೋಲ್ ಕಾಳೆ, ಕಾರ್ಯದರ್ಶಿ ಅಜಿಂಕ್ಯ ನಾಯ್ಕ್ ಅವರು ಭಾಗವಹಿಸಲಿದ್ದಾರೆ.* ಸ್ಟ್ರೋಕ್‌ ಮಾಡುವ ಭಂಗಿಯಲ್ಲಿರುವ ಪ್ರತಿಮೆಗೆ ಅಕ್ಟೋಬರ್ 31 ರಂದು ಅಂತಿಮ ಸ್ಪರ್ಶ ನೀಡಲಾಯಿತು. ಈ ಪ್ರತಿಮೆಯನ್ನು ಅಹಮದ್ ನಗರದ ಪ್ರಸಿದ್ಧ ಚಿತ್ರ ಕಲಾವಿದ ಪ್ರಮೋದ್ ಕಾಂಬ್ಳೆ ಅವರು ಪ್ರತಿಮೆಯನ್ನು ನಿರ್ಮಿಸಿದ್ದಾರೆ.