* ಭಾರತದ ಮೊದಲ ವಂದೇ ಮೆಟ್ರೋ ರೈಲನ್ನು ಏಪ್ರಿಲ್ 30 ರಂದು ಚೆನ್ನೈನಲ್ಲಿ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಅನಾವರಣ ಮಾಡಲಾಗಿದೆ ಮತ್ತು ಮೊದಲ ಬಾರಿಗೆ ಭಾರತದಲ್ಲಿ ರೈಲ್ವೆ ವಲಯಯು ವಂದೇ ಮೆಟ್ರೋ ರೈಲಿನ ಮಹತ್ವದ ಮೈಲಿಗಲ್ಲು ಎನ್ನಲಾಗಿದೆ.* ವಂದೇ ಭಾರತ ಎಕ್ಸ್‌ಪ್ರೆಸ್ ರೈಲು 250 ಕಿ.ಮೀ. ಅಂತರದ ನಗರ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಂದೇ ಭಾರತ್ ಮೆಟ್ರೋ ರೈಲನ್ನು ವಿನ್ಯಾಸಗೊಳಿಸಲಾಗಿದೆ. * ವಂದೇ ಮೆಟ್ರೋ ರೈಲುಗಳು 100 ಕಿಮೀ ಮತ್ತು 250 ಕಿಮೀ ನಡುವಿನ ಅಂತರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲುವಾಗುವಂತೆ ಅನುಕೂಲಕರವಾಗಿ ನಿರ್ಮಿಸಿದ್ದಾರೆ.* ವಂದೇ ಮೆಟ್ರೋ ರೈಲುಗಳ ಪ್ರಾಯೋಗಿಕ ಹಂತವು ಜುಲೈನಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ.* ವಂದೇ ಮೆಟ್ರೋ ರೈಲುಗಳನ್ನು ದೇಶಾದ್ಯಂತ 124 ನಗರಗಗಲ್ಲಿ ಸಂಪರ್ಕಿಸುವ ಎಲ್ಲ ಗುರಿಗಳನ್ನು ಹೊಂದಿವೆ ಮತ್ತು ಆರಂಭಿಕವಾಗಿ ನಡೆದ ಚೆನ್ನೈ-ತಿರುಪತಿ, ಭುವನೇಶ್ವರ-ಬಾಲಾಸೋರ್ ಆಗ್ರಾ-ಮಥುರಾ ದೆಹಲಿ-ರೇವಾರಿ ಮತ್ತು ಲಕ್ನೋ-ಕಾನ್ಪುರ್ ಮಾರ್ಗಗಳಲ್ಲಿ ವಂದೇ ಮೆಟ್ರೋ ರೈಲು ಸಂಚಾರ ಶುರುವಾಗಲಿದೆ ಎಂದು ತಿಳಿಸಿದ್ದಾರೆ.