* ಆಸ್ಟ್ರಿಯಾದ ರಾಜಧಾನಿ ವಿಯೆನ್ನಾವನ್ನು 2023 ರಲ್ಲಿ ವಿಶ್ವದ "ಅತ್ಯಂತ ವಾಸಯೋಗ್ಯ ನಗರ" ಎಂದು ಹೆಸರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.* ತನ್ನ ವಿಶ್ವಾಸಾರ್ಹ ಮೂಲಸೌಕರ್ಯ, ಅಸಾಧಾರಣ ಸಂಸ್ಕೃತಿ ಮತ್ತು ಮನರಂಜನೆ, ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗಾಗಿ ಪ್ರಶಂಸೆ ಗಳಿಸಿರುವ ವಿಯೆನ್ನಾಗೆ "ಅತ್ಯಂತ ವಾಸಯೋಗ್ಯ ನಗರ" ಎಂಬ ಕಿರೀಟ ಲಭ್ಯವಾಗಿದೆ.* ಈ ಪಟ್ಟಿಯಲ್ಲಿ ಡೆನ್ಮಾರ್ಕ್‌ನ ರಾಜಧಾನಿ ಕೋಪನ್ ಹ್ಯಾಗನ್ ತನ್ನ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಆಸ್ಟ್ರೇಲಿಯಾದ ಎರಡು ನಗರಗಳಾದ ಮೆಲ್ಬೋರ್ನ್ ಮತ್ತು ಸಿಡ್ನಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿವೆ.