* 2024ರ ಮಹಿಳಾ T20 ವಿಶ್ವಕಪ್‌ನಿಂದ ಪ್ರಾರಂಭವಾಗುವ ಎಲ್ಲಾ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಸಮಾನ ಬಹುಮಾನವನ್ನು ಪಡೆಯುತ್ತವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪ್ರಕಟಿಸಿದೆ.* 2023ರ ಜುಲೈನಲ್ಲಿ ನಡೆದಿದ್ದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದೆ. 2030ರ ವೇಳೆಗೆ ವಿಶ್ವಕಪ್ ಟೂರ್ನಿಯಲ್ಲಿ ಬಹುಮಾನ ಮೊತ್ತವನ್ನು ಪುರುಷರ ಹಾಗೂ ಮಹಿಳೆಯರ ತಂಡಕ್ಕೆ ಸಮಾನವಾಗಿ ಹಂಚುವ ಗುರಿ ಹೊಂದಲಾಗಿತ್ತು. ಇದೀಗ ಐಸಿಸಿ ಮಂಡಳಿಯು 7 ವರ್ಷಗಳ ಮುಂಚಿತವಾಗಿಯೇ ಈ ಗುರಿಯನ್ನು ಸಾಧಿಸಲು ನಿರ್ಧರಿಸಿದೆ.* ವಿಶ್ವಕಪ್ ಸ್ಪರ್ಧೆಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ಬಹುಮಾನ ಮೊತ್ತ ನೀಡಲು ಮುಂದಾಗಿರುವ ಮೊದಲ ಪ್ರಮುಖ ಕ್ರೀಡಾ ತಂಡ ಕ್ರಿಕೆಟ್ ಆಗಿದೆ.* ಈ ಕ್ರಮವು ಮಹಿಳಾ ಆಟಕ್ಕೆ ಆದ್ಯತೆ ನೀಡಲು ಮತ್ತು 2032 ರ ವೇಳೆಗೆ ಅದರ ಬೆಳವಣಿಗೆಯನ್ನು ವೇಗಗೊಳಿಸಲು ICC ಯ ಕಾರ್ಯತಂತ್ರಕ್ಕೆ ಅನುಗುಣವಾಗಿದೆ. * ಈ ವರ್ಷ ಯುಎಇನಲ್ಲಿ ವಿಶ್ವಕಪ್ ಪಂದ್ಯಾವಳಿಯನ್ನು ನಿಗದಿಪಡಿಸಲಾಗಿದೆ. ವಿಜೇತ ತಂಡವು 2.34 ಮಿಲಿಯನ್ ಡಾಲರ್ ಸ್ವೀಕರಿಸಲಿದೆ. 2023ರಲ್ಲಿ ಆಸ್ಟ್ರೇಲಿಯ ತಂಡ 1 ಮಿಲಿಯನ್ ಡಾಲರ್ ಸ್ವೀಕರಿಸಿತ್ತು. ಇದೀಗ ಬಹುಮಾನ ಮೊತ್ತವನ್ನು 134 ಶೇ.ದಷ್ಟು ಹೆಚ್ಚಿಸಲಾಗಿದೆ.