* ಪ್ರಪಂಚದಲ್ಲೇ ಅತ್ಯಂತ ಕಡಿಮೆ ಜನನ ದರವನ್ನು ಹೊಂದಿದ ಜಪಾನ್   ಇದೀಗ ವಿಶ್ವದಲ್ಲೇ ಅತಿಹೆಚ್ಚು ವೃದ್ಧರನ್ನು ಹೊಂದಿದ ರಾಷ್ಟ್ರವಾಗಿಯೂ ಹೊರಹೊಮ್ಮಿದೆ. * ಇದು ದೇಶದ ಎಲ್ಲಾ ಕ್ಷೇತ್ರಗಳ ಮೇಲೆಯೂ ಪ್ರಭಾವ ಬೀರುತ್ತದೆ. ಉದ್ಯೋಗ ದರ ಕಡಿಮೆಯಾಗಿ ದೇಶದ ಆರ್ಥಿಕತೆಯೂ ಕುಸಿಯಲಿದೆ.* ಜಪಾನ್‌ನಲ್ಲಿ ಪ್ರತಿ 10 ಜನರಲ್ಲಿ ಒಬ್ಬರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ವೃದ್ಧರ ಸಂಖ್ಯೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.* ವಿಶ್ವದಲ್ಲೇ ಅತಿಹೆಚ್ಚು ವೃದ್ಧರನ್ನು ಹೊಂದಿದ ಎರಡನೇ ರಾಷ್ಟ್ರ ಇಟಲಿ ಹಾಗೂ ಮೂರನೇ ದೇಶ ಫಿನ್‌ಲ್ಯಾಂಡ್‌ ಆಗಿದೆ. ಇಟಲಿಯ ಜನಸಂಖ್ಯೆಯ ಶೇ. 24.5 ರಷ್ಟು ಹಾಗೂ ಫಿನ್‌ಲ್ಯಾಂಡ್‌ ಜನಸಂಖ್ಯೆಯ ಶೇ.23.6 ರಷ್ಟು ಜನರು 66ಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದಾರೆ.