* ಪ್ರೋಬ್ಸ್ ಇತ್ತೀಚಿಗೆ ಬಿಡುಗಡೆ ಮಾಡಿದ 2024ನೇ ಸಾಲಿನ ವಿಶ್ವದ ಟಾಪ್ 10 ಸಿರಿವಂತ ಮಹಿಳಾ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೆಎಸಡಬ್ಲ್ಯು ಗ್ರೂಪ್ ನ ಒಡತಿ ಸಾವಿತ್ರಿ ಜಿಂದಾಲ್ ಈ ವಿಶ್ವದ ಟಾಪ್ 10 ಸಿರಿವಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.* 2024ನೇ ಸಾಲಿನ ವಿಶ್ವದ ಸಿರಿವಂತ ಮಹಿಳಾ ಉದ್ಯಮಿಗಳ ಪಟ್ಟಿ : 1. 97.6 ಬಿಲಿಯನ್ ಮೌಲ್ಯದ ಲೊರಿಯಲ್ ಒಡತಿ ಬೆಟ್ಟೆನ್‌ಕೋರ್ಟ್ ಮೆಯರ್ಸ್ ಮತ್ತು ಕುಟುಂಬ2. 78.5 ಬಿಲಿಯನ್ ಮೌಲ್ಯದ ವಾಲ್ ಮಾರ್ಟ್ ಒಡತಿ ಅಲೈಸ್ ವಾಲ್ಸನ್3. 65.5 ಬಿಲಿಯನ್ ಮೌಲ್ಯದ ಕೊಚ್ ಇಂಡಸ್ಟ್ರೀಸ್‌ನ ಜೂಲಿಯಾ ಕೊಚ್ ಮತ್ತು ಕುಟುಂಬ4. 39.8 ಬಿಲಿಯನ್ ಮೌಲ್ಯದ ಜೆಎಸ್‌ಡಬ್ಲ್ಯು ಗ್ರೂಪ್‌ನ ಒಡತಿ ಭಾರತದ ಸಾವಿತ್ರಿ ಜಿಂದಾಲ್ ಮತ್ತು ಅವರ ಕುಟುಂಬ* ಲ್ಯಾಂಡ್‌ಮಾರ್ಕ್ ಗ್ರೂಪ್‌ನ ರೇಣುಕಾ ಜಗ್ತಿಯಾನಿ ಥರ್ಮ್ಯಾಕ್ಸ್‌ನ ಅನು ಆಗಾ, ಗೋದ್ರೇಜ್‌ನ ಸ್ಮಿತಾ ಕೃಷ್ಣ, ಜೊಹೊ ಕಾರ್ಪೊರೇಷನ್‌ನ ರಾಧಾ ವೆಂಬು, ಯುಎಸ್‌ವಿ ಫಾರ್ಮಾದ - ಲೀನಾ ತಿವಾರಿ, ನೈಕಾದ ಫಲ್ಗುಣಿ ನಾಯರ್, ಬಯೋಕಾನ್‌ನ ಕಿರಣ್ ಮಜುಂದಾರ್-ಶಾ ಪಟ್ಟಿಯಲ್ಲಿರುವ ಇತರ ಮಹಿಳಾ ಉದ್ಯಮಿಗಳಾಗಿದ್ದಾರೆ.* ಭಾರತದ ಸಿರಿವಂತ ಮಹಿಳಾ ಉದ್ಯಮಿಗಳ ಪಟ್ಟಿ : 1.  39.8 ಬಿಲಿಯನ್ ಮೌಲ್ಯದ ಜೆಎಸ್‌ಡಬ್ಲ್ಯು ಗ್ರೂಪ್‌ನ ಒಡತಿ ಭಾರತದ ಸಾವಿತ್ರಿ ಜಿಂದಾಲ್ ಮತ್ತು ಅವರ ಕುಟುಂಬ2. 7.8 ಬಿಲಿಯನ್ ಮೌಲ್ಯದ ಟೈಟಾನ್ ಕಂಪನಿ ಲಿಮಿಟೆಡ್‌ನ ಉದ್ಯಮಿ ರೇಖಾ ಜುಂಜುನ್ವಾಲಾ3. 5.7 ಬಿ. ಮೌಲ್ಯದ ಹ್ಯಾವೆಲ್ಸ್‌ನ ಒಡತಿ ವಿನೋದ್ ಗುಪ್ತಾ.