* ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಸಂಸ್ಥೆ ವಿಶ್ವದ ಅತ್ಯಂತ ಟ್ರಾಫಿಕ್ ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವದ ಸುಮಾರು 387 ನಗರಗಳನ್ನ ಆಯ್ಕೆ ಮಾಡಿ ಅತ್ಯಂತ ಜನದಟ್ಟಣೆ ನಗರ ಯಾವುದು ಎಂದು ಸಮೀಕ್ಷೆ ಮಾಡಿದ್ದು ಈ ಪೈಕಿ ಭಾರತದ ಎರಡು ಮಹಾನಗರಗಳು ವಿಶ್ವದ ಅತ್ಯಂತ ಜನದಟ್ಟಣೆ ನಗರಗಳು ಎಂಬ ಕುಖ್ಯಾತಿಗೆ ಪಾತ್ರವಾಗಿವೆ‌‌‌. ಬೆಂಗಳೂರು ಆರನೇ ಸ್ಥಾನ ಪಡೆದುಕೊಂಡಿದೆ ಪುಣೆ ಏಳನೇ ಸ್ಥಾನ ಪಡೆದುಕೊಂಡಿದೆ.*  ವಿಶ್ವದ ಟಾಪ್ ಮೋಸ್ಟ್ ನಗರಗಳಲ್ಲಿ ಸರಾಸರಿ 10 ಕಿಲೋ ಮೀಟರ್ ಸಂಚಾರ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಸಂಸ್ಥೆ ಅಧ್ಯಯನ ಮಾಡಿದೆ. ಈ ಅಧ್ಯಯನದಲ್ಲಿ ಬೆಂಗಳೂರು ಟ್ರಾಫಿಕ್ನಲ್ಲಿ 10 ಕಿಲೋ ಮೀಟರ್ ತಲುಪಲು 28 ನಿಮಿಷ 10 ಸೆಕೆಂಡು ಪ್ರಯಾಣ ಮಾಡಬೇಕು ಎಂದು ತಿಳಿದು ಬಂದಿದೆ. ಪುಣೆ ಟ್ರಾಫಿಕ್ನಲ್ಲಿ 10 ಕಿಲೋ ಮೀಟರ್ ತಲುಪಲು 27 ನಿಮಿಷ 50 ಸೆಕೆಂಡು ಪ್ರಯಾಣ ಮಾಡಬೇಕು. * ಇದಕ್ಕೂ ಮುಂಚೆ ಟ್ರಾಫಿಕ್ ಕ್ವಾಲಿಟಿ ಇಂಡೆಕ್ಸ್ ದೇಶದ ಅತ್ಯಂತ ಟ್ರಾಫಿಕ್ ನಗರಗಳ ಸಮೀಕ್ಷೆ ಮಾಡಿದ್ದು ಮೊದಲ ಸ್ಥಾನ ಪಡೆದಿದ್ದ ಬೆಂಗಳೂರು ಟೀಕೆಗೆ ಗುರಿಯಾಗಿತ್ತು. ಈಗ ವಿಶ್ವದ ಟ್ರಾಫಿಕ್ ನಗರಗಳ ಪಟ್ಟಿಯಲ್ಲೂ ಟಾಪ್ ಹತ್ತರಲ್ಲಿ ಬೆಂಗಳೂರು ಗುರುತಿಸಿಕೊಂಡಿದೆ.‌* ಈ ಪಟ್ಟಿಯಲ್ಲಿ ಭಾರತದ ನವದೆಹಲಿ ಮತ್ತು ಮುಂಬೈ ಕ್ರಮವಾಗಿ 44 ನೇ ಮತ್ತು 54 ನೇ ಶ್ರೇಯಾಂಕ ಪಡೆದಿದ್ದು ಅಗ್ರ 50 ರೊಳಗೆ ಸ್ಥಾನ ಪಡೆದಿವೆ.* ವಿಶ್ವದ ಟಾಪ್ ಟ್ರಾಫಿಕ್ ಸಿಟಿಗಳು: - ಲಂಡನ್‌ (ಯುಕೆ) ಮೊದಲ ಸ್ಥಾನ- ಡಬ್ಲಿನ್ (ಐರ್ಲೆಂಡ್) ಎರಡನೇ ಸ್ಥಾನ- ಟೊರೊಟೊ (ಕೆನಡಾ) ಮೂರನೇ ಸ್ಥಾನ- ಮಿಲನ್ (ಇಟಲಿ) ನಾಲ್ಕನೇ ಸ್ಥಾನ- ಲಿಮಾ‌ (ಪೆರು) ಐದನೇ ಸ್ಥಾನ- ಬೆಂಗಳೂರು (ಭಾರತ) ಆರನೇ ಸ್ಥಾನ- ಪುಣೆ (ಭಾರತ) ಏಳನೇ ಸ್ಥಾನ- ಬುಕಾರೆಸ್ಟ್ (ರೊಮೇನಿಯಾ) ಎಂಟನೇ ಸ್ಥಾನ - ಮನಿಲಾ (ಫಿಲಿಪೈನ್ಸ್) ಒಂಬತ್ತನೇ ಸ್ಥಾನ - ಬ್ರಸೆಲ್ಸ್ (ಬೆಲ್ಜಿಯಂ) ಹತ್ತನೇ ಸ್ಥಾನ