* ಲಾವೋಸ್‌ನಲ್ಲಿ 21 ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು 'ಏಷ್ಯಾ ವಲಯದ ಭವಿಷ್ಯದ ದಿಕ್ಕೂಚಿಯಾಗಿ ಪ್ರಾದೇಶಿಕವಾಗಿ ರಾಷ್ಟ್ರಗಳು ಒಟ್ಟುಗೂಡುವುದು ನಿರ್ಣಾಯಕ' ಎಂದು ಪ್ರತಿಪಾದಿಸಿದ್ದಾರೆ.* 'ಕಳೆದ ದಶಕದಲ್ಲಿ ಭಾರತ -ಆಸಿಯಾನ್ ರಾಷ್ಟ್ರಗಳ ವಾಣಿಜ್ಯ ವಹಿವಾಟು 130 ಬಿಲಿಯನ್ ಡಾಲರ್‌ಗೂ ಅಧಿಕವಾಗಿದೆ. ಹೆಚ್ಚಿನ ಆರ್ಥಿಕ ವಹಿವಾಟಿಗೆ ಪೂರಕವಾಗಿ ಸರಕುಗಳ ವಾಣಿಜ್ಯ ಒಪ್ಪಂದ ಪರಿಶೀಲಿಸಲಾಗುವುದು' ಎಂದು ಮೋದಿ ಹೇಳಿದ್ದಾರೆ.* ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವೆ ಸಮಗ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ 10 ಅಂಶಗಳ ಕಾರ್ಯಕ್ರಮವನ್ನು ಪ್ರಕಟಿಸಿದ್ದಾರೆ.1. 2025ರಲ್ಲಿ ಭಾರತ -ಆಸಿಯಾನ್ ರಾಷ್ಟ್ರಗಳ ಪ್ರವಾಸೋದ್ಯಮ ವರ್ಷಾಚರಣೆ.2 .ನಳಂದ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್‌ಶಿಪ್‌ಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವುದು. 3. ಆಸಿಯಾನ್ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಭಾರತದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅನುದಾನ ಒದಗಿಸುವುದು.4.  ಯುವಶೃಂಗ, ಸ್ಟಾರ್ಟಪ್ ಉತ್ಸವ, ಹ್ಯಾಕಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ 'ಪೂರ್ವ ಕೇಂದ್ರಿತ ನೀತಿ'ಯ ದಶಕದ ಆಚರಣೆ5. ಭಾರತ -ಆಸಿಯಾನ್ ಮಹಿಳಾ ವಿಜ್ಞಾನಿಗಳ ಸಮಾವೇಶ ಆಯೋಜನೆ.6. ವಿಕೋಪ ನಿರ್ವಹಣೆ ಕಾರ್ಯಗಳಿಗೆ ಒತ್ತು ನೀಡಲು 42ಕೋಟಿ ರೂ.ನೆರವು7. ಆರೋಗ್ಯ ಕ್ಷೇತ್ರದಲ್ಲಿ ಸ್ಥಿತಿಸ್ಥಾಪಕತ್ವಕ್ಕಾಗಿ ಆರೋಗ್ಯ ಸಚಿವರ ಸಂಪರ್ಕ ಜಾಲ ರಚನೆ 8. ಡಿಜಿಟಲ್ ಮತ್ತು ಸೈಬ‌ರ್ ಬೆದರಿಕೆ ಎದುರಿಸಲು ಆಸಿಯಾನ್ - ಭಾರತ ಸೈಬರ್ ನೀತಿಯ ನಿಯಮಿತ ಪರಿಶೀಲನೆ9.ಹವಾಮಾನ ವೈಪರೀತ್ಯ ಎದುರಿಸಿ, ಹವಾಮಾನ ಸ್ಥಿತಿಸ್ಥಾಪಕತ್ವ ಗುರಿ ಸಾಧನೆಗೆ 'ಫ್ಲ್ಯಾಂಟ್ ಎ ಟ್ರಿ' ಅಭಿಯಾನಕ್ಕೆ ಕೈಜೋಡಿಸಲು ಆಸಿಯಾನ್ ನಾಯಕರಿಗೆ ಆಹ್ವಾನ10.ಆಸಿಯಾನ್ - ಭಾರತ ಸಂವಹನಕ್ಕಾಗಿ ಚಾವಡಿಯ ಸಂಪರ್ಕ ಜಾಲ