Job Description: * ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿಯ ಪ್ರಕಾರ ಸ್ಪೇಸ್‌ ಎಕ್ಸ್, ಟೆಸ್ಲಾ ಮೊದಲಾದ ಸಂಸ್ಥೆಗಳ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರು ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಕಳೆದುಕೊಂಡಿದ್ದಾರೆ. * ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್‌ನ ಮೂಲ ಕಂಪನಿ ಎಲ್‌ವಿಎಂಹೆಚ್‌ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಮತ್ತು ಫ್ಯಾಮಿಲಿ ಈಗ ವಿಶ್ವದ ನಂ.1 ಶ್ರೀಮಂತ ಎನಿಸಿದೆ. ಅರ್ನಾಲ್ಟ್ ಕುಟುಂಬವು ಫೋರ್ಬ್ಸ್ ಪಟ್ಟಿಯಲ್ಲಿ $ 185.8 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದೆ.* ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನಲ್ಲಿ (Bloomber Billionaires Index) ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. * 2021ರ ಸೆಪ್ಟೆಂಬರ್ ನಿಂದ ಈಚೆಗೆ ಮಸ್ಕ್ ಅವರು ಫೋರ್ಬ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರು. ಅವರ ವೈಯಕ್ತಿಕ ಸಂಪತ್ತಿನ ಮೌಲ್ಯ 185.3 ಶತಕೋಟಿ ಡಾಲರ್ ಆಗಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಮಸ್ಕ್ ಕೈತಪ್ಪಿದ ಬೆನ್ನಲ್ಲೇ ಟೆಸ್ಲಾ ಷೇರು ಮೌಲ್ಯದಲ್ಲಿ ಶೇಕಡಾ 4ರಷ್ಟು ಕುಸಿತವಾಗಿದೆ.* ಮಾರ್ಚ್ 4 ರಂದು ಟೆಸ್ಲಾ ಷೇರುಗಳ ಶೇಕಡ 7.2 ರಷ್ಟು ಕುಸಿದ ನಂತರ ಮಸ್ಕ್ ತನ್ನ ನಂ.1 ಸ್ಥಾನವನ್ನು ಕಳೆದುಕೊಂಡರು. ಮಸ್ಕ್ ಅವರ ನಿವ್ವಳ ಮೌಲ್ಯವನ್ನು ಈಗ $197.7 ಬಿಲಿಯನ್ ಎಂದು ನಿಗದಿಪಡಿಸಲಾಗಿದೆ.* 2022 ರಲ್ಲಿ, ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯವು $ 200 ಶತಕೋಟಿಗಿಂತ ಕಡಿಮೆಯಾಗಿದೆ. ಏಕೆಂದರೆ ಟೆಸ್ಲಾ ಷೇರುಗಳು ಎರಡು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿವೆ. ಟ್ವಿಟ್ಟರ್ ಅನ್ನು ಖರೀದಿಸಲು ಮಸ್ಕ್ ಘೋಷಿಸಿದ ನಂತರ ಟೆಸ್ಲಾ ಅವರ ಮಾರುಕಟ್ಟೆ ಬಂಡವಾಳೀಕರಣವು ಅರ್ಧದಷ್ಟು ಕಡಿಮೆಯಾಗಿದೆ. ಈ ಕಾರಣದಿಂದಾಗಿ, ಮಸ್ಕ್‌ನ ಒಟ್ಟು ಆಸ್ತಿ ಸುಮಾರು $ 70 ಬಿಲಿಯನ್‌ನಷ್ಟು ಕಡಿಮೆಯಾಗಿದೆ. * ಟೆಸ್ಲಾ ಹೊರತಾಗಿ, ಮಸ್ಕ್ ಸ್ಪೇಸ್‌ಎಕ್ಸ್ ಮತ್ತು ನ್ಯೂರಾಲಿಂಕ್‌ನ ಮುಖ್ಯಸ್ಥರಾಗಿದ್ದಾರೆ. ನ್ಯೂರಾಲಿಂಕ್ ಮಾನವನ ಮೆದುಳನ್ನು ಕಂಪ್ಯೂಟರ್‌ಗೆ ಸಂಪರ್ಕಿಸಲು ಅಲ್ಟ್ರಾ-ಹೈ ಬ್ಯಾಂಡ್‌ವಿಡ್ತ್ ಬ್ರೈನ್-ಮೆಷಿನ್ ಇಂಟರ್‌ಫೇಸ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅಂದರೆ, ಶೀಘ್ರದಲ್ಲೇ ಮಾನವನ ಮಿದುಳಿಗೆ ಚಿಪ್‌ ಅಳವಡಿಸಲು ಸಾಧ್ಯವಾಗಲಿದೆ.