Job Description: * ಜೈಪುರದ ಹೊರವಲಯದಲ್ಲಿ 75,000 ಆಸನ ಸಾಮರ್ಥ್ಯ ಮತ್ತು 350 ಕೋಟಿ ರೂ ವೆಚ್ಚದಲ್ಲಿ ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಮವಾಗಲಿದೆ.* ಜೈಪುರದ ಚೊನ್ಪ್ ಗ್ರಾಮದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ಅಭಿವೃದ್ಧಿಗಾಗಿ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ (ಆರ್‌ಸಿಎ) ಯೊಂದಿಗೆ ಎಂಒಯುಗೆ ಸಹಿ ಹಾಕಿದೆ. * ಕ್ರೀಡಾಂಗಣ 100 ಎಕರೆ ವಿಸ್ತೀರ್ಣ ಹೊಂದಲಿದ್ದು, 75,000ಕ್ಕೂ ಹೆಚ್ಚು ಆಸನ ಸಾಮರ್ಥ್ಯ ಹೊಂದಿರುತ್ತದೆ. ಆಟದ ಮೈದಾನದ ಪ್ರದೇಶದ ಗಾತ್ರಕ್ಕೆ ಸಂಬಂಧಿಸಿದಂತೆ ಈ ಕ್ರೀಡಾಂಗಣವು ವಿಶ್ವದಲ್ಲೇ ಅತಿ ದೊಡ್ಡದಾಗಿದೆ.