* ಭಾರತದ ಶ್ರೀಜಾ ಅಕುಲಾ ಅವರು ಲೆಬನಾನ್‌ನ ರಾಜಧಾನಿ ಬೇರೂತ್‌ನಲ್ಲಿ ನಡೆದ ಡಬ್ಲ್ಯುಟಿಟಿ ಫೀಡರ್‌ ಸರಣಿಯ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು. ಪುರುಷರ ಡಬಲ್ಸ್‌ನಲ್ಲಿ ಮಾನವ್‌ ಠಕ್ಕರ್‌– ಮನುಷ್‌ ಉತ್ಪಲ್‌ಭಾಯ್ ಷಾ ಜೋಡಿಯು ಪ್ರಶಸ್ತಿಯನ್ನು ಗೆದ್ದುಕೊಂಡಿತು.* ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.47 ಶ್ರೀಜಾ ಅಕುಲಾ 6-11, 12-10, 11-5, 11-9 0 ಲಕ್ಸೆಂಬರ್ಗ್‌ನ ಸಾರಾ ಡಿ ನಟ್ಟೆ ಎದುರು ಗೆದ್ದು ಬೀಗಿದರು. ಇದರೊಂದಿಗೆ 25 ವರ್ಷದ ಶ್ರೀಜಾ ವೃತ್ತಿ ಜೀವನದ 2ನೇ ವಿಶ್ವ ಟೇಬಲ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಒಲಿಸಿಕೊಂಡರು.  ಇದಕ್ಕೂ ಮುನ್ನ ಜನವರಿಯಲ್ಲಿ ಫೀಡ‌ರ್ ಕಾರ್ಪಸ್ ಕ್ರಿಸ್ಟಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. * ಮಹಿಳೆಯರ ಡಬಲ್ಸ್‌ನಲ್ಲಿ ಶ್ರೀಜಾ-ದಿಯಾ ಚಿತಾರೆ ಜೋಡಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದೆ. ಆದರೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪೋಯ್ಯಾಂಟಿ ಬೈಸ್ಯಾ-ಆಕಾಶ್ ಪಾಲ್ ಜೋಡಿ ಸತ್ಯನ್- ಮನಿಕಾ ಬಾತ್ರಾ ಜೋಡಿಯನ್ನು 11-9, 7-11, 11-9,11-0 ರಿಂದ ಮಣಿಸಿ ಪ್ರಶಸ್ತಿ ಜಯಿಸಿತು.