* ನಗರದ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 71ನೇ ವಿಶ್ವ ಸುಂದರಿ ಫಿನಾಲೆ ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಖೇಶ್ ಅಂಬಾನಿ ಅವರಿಗೆ 'ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್' ನೀಡಿ ಗೌರವಿಸಲಾಗಿದೆ. * ಮಿಸ್ ವರ್ಲ್ಡ್ ಆರ್ಗನೈಸೇಶನ್‌ನ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಅವರು ನೀತಾ ಅಂಬಾನಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿದರು. * ರಿಲಯನ್ಸ್ ಫೌಂಡೇಶನ್‌ನ ಮುಖ್ಯಸ್ಥರಾಗಿರುವ ನೀತಾ ಅಂಬಾನಿ ಅವರಿಗೆ ಲೋಕೋಪಕಾರ ಮತ್ತು ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಮಿಸ್ ವರ್ಲ್ಡ್ ಫೌಂಡೇಶನ್‌ನ 'ಮಾನವೀಯ ಪ್ರಶಸ್ತಿ'ಯನ್ನು 'ಬ್ಯೂಟಿ ವಿತ್ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್ ನೀಡಲಾಯಿತು.* ಭಾರತವು 1996 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ 46 ನೇ ಆವೃತ್ತಿಯನ್ನು ಆಯೋಜಿಸಿತ್ತು, ಇದರಲ್ಲಿ ಗ್ರೀಸ್‌ನ ಐರಿನ್ ಸ್ಕ್ಲಿವಾ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.* ಡಿಸೆಂಬರ್ 4, 2023 ರಂದು ನವದೆಹಲಿಯಲ್ಲಿ ನಡೆದ CII ಸ್ಕೋರ್‌ಕಾರ್ಡ್ 2023 ಈವೆಂಟ್‌ನಲ್ಲಿ ನೀತಾ ಅಂಬಾನಿ ಅವರಿಗೆ " ವರ್ಷದ ಕ್ರೀಡಾ ನಾಯಕಿ - ಮಹಿಳೆ " ಪ್ರಶಸ್ತಿ ಹಾಗೂ  ರಿಲಯನ್ಸ್ ಫೌಂಡೇಶನ್ "ಭಾರತದಲ್ಲಿ ಅತ್ಯುತ್ತಮ ಕಾರ್ಪೊರೇಟ್ ಪ್ರಮೋಟಿಂಗ್ ಸ್ಪೋರ್ಟ್ಸ್" ಪ್ರಶಸ್ತಿಯನ್ನು ಕೂಡಾ ನೀಡಿ ಗೌರವಿಸಲಾಯಿತು.