* ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ ಅವರು 255 ಮತಗಳನ್ನು ಪಡೆಯುವ ಮೂಲಕ ಶನಿವಾರ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. * 2008 ರಿಂದ 2013ರವರೆಗೆ ಇವರು ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. * ಪಿಪಿಪಿಯ ಹಿರಿಯ ನಾಯಕರಾಗಿರುವ ಆಸಿಫ್‌ ಅಲಿ ಜರ್ದಾರಿ, ಪಾಕಿಸ್ತಾನದ ಇತಿಹಾಸದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮೊದಲ ಮತ್ತು ಹಿರಿಯ ನಾಗರೀಕ ಎನಿಸಿಕೊಂಡಿದ್ದಾರೆ. * ಪಿಪಿಪಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸಮ್ಮಿಶ್ರ ಸರ್ಕಾರದ ಜಂಟಿ ಅಭ್ಯರ್ಥಿ ಜರ್ದಾರಿ ಅವರು 255 ಮತಗಳನ್ನು ಪಡೆದುಕೊಂಡರೆ, ಇಮ್ರಾನ್ ಖಾನ್ ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಅಭ್ಯರ್ಥಿ ಮಹಮೂದ್ ಖಾನ್ ಅಚಕ್ಜಾಯ್ 119 ಮತಗಳನ್ನು ಪಡೆದುಕೊಂಡರು.* ಪಾಕಿಸ್ತಾನ ಸಂವಿಧಾನದ ನಿಬಂಧನೆಯ ಪ್ರಕಾರ, ಹೊಸದಾಗಿ ಆಯ್ಕೆಯಾದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರ ಚುನಾವಣಾ ಕಾಲೇಜು ಮತ್ತು ನಾಲ್ಕು ಪ್ರಾಂತೀಯ ಅಸೆಂಬ್ಲಿಗಳು ಜರ್ದಾರಿಯನ್ನು ಚುನಾಯಿಸಿದವು. ಒಬ್ಬ ಉದ್ಯಮಿ-ರಾಜಕಾರಣಿಯಾಗಿರುವ 68 ವರ್ಷದ ಜರ್ದಾರಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪತಿ.* ಜರ್ದಾರಿ ಅವರು ಪಾಕಿಸ್ತಾನದ ಇತಿಹಾಸದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ನಾಗರಿಕರಾಗಿದ್ದಾರೆ. ಕಳೆದ ವರ್ಷ ಐದು ವರ್ಷಗಳ ಅವಧಿ ಮುಗಿಸಿರುವ ಡಾ.ಆರಿಫ್ ಅಲ್ವಿ ಅವರ ಸ್ಥಾನವನ್ನು ಜರ್ದಾರಿ ವಹಿಸಿಕೊಳ್ಳಲಿದ್ದಾರೆ. ಆದರೆ, ಹೊಸ ಸರ್ಕಾರ ಸಂಪೂರ್ಣವಾಗಿ ರಚನೆಯಾಗದ ಕಾರಣ ಅವರು ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.