* ವಿಶ್ವ ಸಂಸ್ಥೆಯ ಜೂನ್ 13 ರಂದು ಬಿಡುಗಡೆ ಮಡಿದ ವರದಿಯನ್ವಯ ಜಾಗತಿಕವಾಗಿ 12 ಕೋಟಿ  ಜನರು ಬಲವಂತವಾಗಿ ಸ್ಥಳಾಂತರವಾಗಿದ್ದರೆ ಎಂದು ವರದಿಯು ತಿಳಿಸಿದೆ.* ಗಾಜಾ, ಸುಡಾನ್, ಮ್ಯಾನ್ಮಾರ್‌ನಲ್ಲಿ ನಡೆದಿರುವ ಸಂಘರ್ಷದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಘಟಕ ಯುಎನ್‌ಎಚ್‌ಸಿಆ‌ರ್ ತಿಳಿಸಿದೆ.* ಕಳೆದ ವರ್ಷದ ಅಂತ್ಯದವರೆಗೆ ಸ್ಥಳಾಂತರಗೊಂಡವರ ಒಟ್ಟು ಸಂಖ್ಯೆ 11.73 ಕೋಟಿ ಎಂದು ಯುಎನ್‌ಎಚ್‌ಸಿಆರ್ ವರದಿಯಲ್ಲಿ ತಿಳಿಸಿದೆ.* ಈ ವರ್ಷದ ಏಪ್ರಿಲ್ ಅಂತ್ಯದ ವೇಳೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಜಗತ್ತಿನಾದ್ಯಂತ ಅಂದಾಜು 12 ಕೋಟಿ ಜನರು ಸ್ಥಳಾಂತರವಾಗಿದ್ದಾರೆ. 12 ವರ್ಷಗಳಿಂದ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂತರರಾಷ್ಟ್ರೀಯ ಬಿಕ್ಕಟ್ಟುಗಳು ಹಾಗೂ ಆಯಾ ದೇಶದೊಳಗಿನ ಆಂತರಿಕ ಸಂಘರ್ಷಗಳನ್ನು ತ್ವರಿತವಾಗಿ ಬಗೆಹರಿಸಲು ವಿಫಲವಾಗಿರುವ ಕಾರಣ 2012ರಿಂದ ವಲಸೆ ಹೋದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.