* ಉತ್ತರ ಕನ್ನಡ ಜಿಲ್ಲೆಯ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಯಾಣದಲ್ಲಿ ದೇಶದ ಮೊಟ್ಟ ಮೊದಲ ಸಾರ್ವಜನಿಕ ವೈಫೈ-7 ಸೇವೆಯನ್ನು ಮಾರ್ಚ 8 ಮಹಾಶಿವರಾತ್ರಿ ದಿನದಂದು ಉದ್ಘಾಟನೆಗೊಳ್ಳಲಿದೆ.* ಬಿ,ಎಸ್,ಎನ್,ಎಲ್, ಭರತ್ ವೈಫೈ, ಹಾಗೂ ಜಿ,ಎನ್,ಎ (GNA) ಸಹಯೋಗದೊಂದಿಗೆ ಯಾಣದ ಶ್ರೀ ಭೈರವೇಶ್ವರ ದೇವಸ್ಥಾನ ಹತ್ತಿರ ಹಾಗೂ ಎರಡು ಪಾರ್ಕಿಂಗ್ ಸ್ಥಳಗಳಲ್ಲಿ ವೈಫೈ ಸೌಲಭ್ಯ ಒದಗಿಸಲಿದೆ.* WiFi networks ನಲ್ಲಿಯೇ ಅತೀ ವೇಗ ಹಾಗೂ ಹೆಚ್ಚು ದೂರ ನೆಟ್ವರ್ಕ್ಸ್ ಕವರೇಜ್ ಹಿಂದಿರುವ ಹೊಸ ತಂತ್ರಜ್ಞಾನದ ಸಾಧನವಾಗಿದೆ.ಭಾರತದಲ್ಲಿ ಇದೀಗ 5G ನೆಟ್ವರ್ಕ್ ಬಂದ ಹಿನ್ನಲೆಯಲ್ಲಿ wifi -7 ನನ್ನು ಪರಿಚಯಿಸಲಾಗಿದೆ.* ಅತೀ ವೇಗದ ಇಂಟರ್ನೆಟ್ ಸೌಲಭ್ಯ ಒದಗಿಸುವ ಈ ಸಾಧನ ಇತ್ತೀಚಿನ ತಂತ್ರಜ್ಞಾನ ದಲ್ಲಿ ಡೌನ್ ಲೋಡ್ ಸ್ಪೀಡ್ ಸಹ ಹೆಚ್ಚಾಗಿದ್ದು ಮುಂದುವರೆದ ದೇಶಗಳಲ್ಲಿ ಹೆಚ್ಚು ಬಳಕೆ ಆಗುತ್ತಿದೆ. ಈ ಸಾಧನ ಕೂಡ ನೀವು ಬಳಸುವ WI-FI ನಂತೆಯೇ ಕಾರ್ಯ ನಿರ್ವಹಿಸಲಿದೆ.# WiFi-7 ಹೇಗೆ ಕಾರ್ಯ ನಿರ್ವಹಿಸಲಿದೆ.*WiFi-7 ಅನ್ನು ಬಳಸಲು ಶಲ್ಕವನ್ನು ವಿಧುಸಲಾಗುತ್ತದೆ. ಸಾಧನವಿರುವ 200 ರಿಂದ 250 ಮೀಟರ್ ವ್ಯಾಪ್ತಿಯಲ್ಲಿ ನೆಟ್ವರ್ಕ್ ಕವರ್ ಆಗಲಿದೆ.*ಈ ರೈಂಜ್ ನಲ್ಲಿ ಇರುವ ಗ್ರಾಹಕ ಮೊಬೈಲ್ ನಲ್ಲಿ ವೈಫೈ ಸರ್ಚ ಮಾಡುದಾಗ ನೆಟ್ವರ್ಕ್ ಹೆಸರನ್ನು ತೋರಿಸುತ್ತದೆ. ಇದನ್ನು ಯಾಕ್ಟಿವ್ ಮಾಡಲು ನಿಮ್ಮ ಮೊಬೈಲ್ ನಂಬರ್ ಹಾಕಬೇಕು,ನಂತರ ಎಷ್ಟು ಜಿಬಿ(GB) ಪ್ಯಾಕ್ ಆಯ್ಕೆ ಬರುತ್ತದೆ. ನಿಮಗೆ ಬೇಕಾದ ಪ್ಯಾಕೇಜ್ ಆಯ್ಕೆ ಮಾಡಿಕೊಂಡು WiFi-7 ನೆಟ್ವರ್ಕ್ ಅನ್ನು ಬಳಸಬಹುದಾಗಿದೆ.