* ಭಾರತೀಯ ನೌಕಾಪಡೆಯಲ್ಲಿ ಲಿಂಗ ಸಮಾನತೆಗೆ ಆದ್ಯತೆ ನೀಡುವ ಉದ್ದೇಶದಿಂದ ಹುದ್ದೆಯ ಶ್ರೇಣಿಯಲ್ಲಿ ಬದಲಾವಣೆ ತರಲು ಭಾರತೀಯ ನೌಕಾಪಡೆ ಮುಂದಾಗಿದೆ.* ಮಹಿಳೆಯರ ನೌ ಸೈನಿಕ ಕ್ಲಾಸ್ l ಅಥವಾ ನೌ ಸೈನಿಕ ll ಗಳೆಂದು ಹುದ್ದೆಯ(ಪದನಾಮ) ಶೀರ್ಷಿಕೆಯ ಬದಲಾವಣೆಯನ್ನು ಕುರಿತು ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾಪಿಸುವುದಾಗಿದೆ ಎಂದು     ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ರಾಧಾಕೃಷ್ಣನ್ ಹರಿಕುಮಾ‌ರ್ ಅವರು ನಿಯೋಜಿಸಿದರು. * ನೌಕಾಪಡೆಯಲ್ಲಿ ಸೇರ್ಪಡೆ ಯಾಗುತ್ತಿರುವ ಮಹಿಳಾ ಸಿಬ್ಬಂದಿ ಹಿನ್ನೆಲೆಯ Seaman (ಸಮುದ್ರ ಕಾರ್ಯಾಚರಣೆಗಳ ನೇತೃತ್ವ ವಹಿಸುವವ) ಹುದ್ದೆಯಲ್ಲಿ ಅರ್ಥವ್ಯತ್ಯಾಸವಾಗುವುದನ್ನು ತಪ್ಪಿಸಲು ಹುದ್ದೆಗಳ ಶೀರ್ಷಿಕೆಯನ್ನು 'nausainik class l' ಅಥವಾ'nausainik class II' ಎಂದು ಬದಲಾವಣೆ ಮಾಡಲು ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು  ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ರಾಧಾಕೃಷ್ಣನ್ ಹರಿಕುಮಾ‌ರ್ ಅವರು ತಿಳಿಸಿದ್ದಾರೆ. * ನೌಕಾಪಡೆಯ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಅವಕಾಶಗಳಿದ್ದು ಕೌಶಲ, ಆತ್ಮವಿಶ್ವಾಸ, ಸಾಮರ್ಥ್ಯ ಗಳೊಂದಿಗೆ ನೌಕಾ ಕಮಾಂಡೋಗಳಾಗಿ ಹಾಗೂ ನಾವಿಕರಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.* 2023 ರಲ್ಲಿ ನೌಕಾಪಡೆಗೆ ಮಹಿಳೆಯರ ನೇಮಕಾತಿ ಆರಂಭಿಸಿದ್ದು ಒಂದೂವರೆ ವರ್ಷದ ಅವಧಿಯಲ್ಲಿ 1,124 ಮಹಿಳಾ ನಾವಿಕರಿದ್ದು ಶೀಘ್ರದಲ್ಲೇ ಕರ್ತವ್ಯಕ್ಕೆ ಸೇರಲಿದ್ದಾರೆಂದು ತಿಳಿಸಿದ್ದಾರೆ.