* ವಿಶ್ವ ಚಾಂಪಿಯನ್ ನಲ್ಲಿ ಭಾರತದ ಅದಿತಿ ಸ್ವಾಮಿ ಅವರು ವಿಶ್ವ ಅರ್ಚರಿ ಚಾಂಪಿಯನ್ ಷಿಪ್‌ನ ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಆದ ಅತಿಕಿರಿಯ ಸ್ಪರ್ಧಿ ಎಂಬ ಗೌರವ ಅವರಿಗೆ ಒಲಿಯಿತು.* 17 ವರ್ಷದ ಅದಿತಿ ಎರಡು ತಿಂಗಳ ಹಿಂದೆ ಜೂನಿಯರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಇದೀಗ ಸೀನಿಯ‌ರ್ ವಿಭಾಗದಲ್ಲೂ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.* ಶನಿವಾರ ನಡೆದ ಫೈನಲ್‌ನಲ್ಲಿ ಅವರು ಮೆಕ್ಸಿಕೊದ ಆಂಡ್ರಿಯಾ ಬೆಸೆರಾ ವಿರುದ್ಧ ಗೆದ್ದರು. ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾದ ಅದಿತಿ ಅವರು ಸಾಧ್ಯವಿರುವ 150 ಪಾಯಿಂ- ಟ್ಸ್‌ಗಳಲ್ಲಿ 149 ಪಾಯಿಂಟ್ಸ್ ಗಳಿಸಿದರೆ, ಅಂಡ್ರಿಯಾ ಕಲೆಹಾಕಿದರು. 147 ಪಾಯಿಂಟ್ಸ್