Job Description: * 2023ರ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಫ್‌) ವಿಶ್ವ ಗೇಮ್ಸ್ ಬರ್ಮಿಂಗ್ ಹ್ಯಾಮ್‌ನಲ್ಲಿ ಆಯೋಜಿಸಲಾಗಿದೆ.* ಭಾರತವನ್ನು ಪ್ರತಿನಿಧಿಸಲಿರುವ ಭಾರತೀಯ ಅಂಧರ ಕ್ರಿಕೆಟ್ ತಂಡಗಳ ಪುರುಷರು ಮತ್ತು ಮಹಿಳೆಯರ ನಾಯಕರ ಹೆಸರನ್ನು ಕ್ರಿಕೆಟ್ ಆಸೋಸಿಯೇಷನ್ ಫಾರ್ ದಿ ಫ್ರೆಂಡ್ ಇನ್ ಇಂಡಿಯಾ (ಸಿಎಬಿಐ) ಗುರುವಾರ(ಆಗಸ್ಟ್ 3) ಪ್ರಕಟಿಸಿದೆ.* 2023ರ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಷನ್ ನಲ್ಲಿ ಭಾಗವಹಿಸುವ ಭಾರತದ ಪುರುಷರ ಕ್ರಿಕೆಟ್ ತಂಡದ ನಾಯಕನಾಗಿ ಆಜಯ್‌ ಕುಮಾರ್ ರೆಡ್ಡಿ ಮತ್ತು ವೆಂಕಟೇಶ್ವರ ರಾವ್ ದುನ್ನಾ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಮಹಿಳಾ ಕ್ರಿಕೆಟ್ ತಂಡದ ನಾಯಕಿಯನ್ನಾಗಿ ಮರ್ವಾ ಉಮಾಪತಿ ಮತ್ತು ಪುಲಾ ಸರನ್ ರನ್ನು ಉಪನಾಯಕಿಯಾಗಿ ನೇಮಿಸಲಾಗಿದೆ. * ಆಗಸ್ಟ್ 14 ರಂದು ಭಾರತೀಯ ಪುರುಷರ ತಂಡವು ಬರ್ಮಿಂಗ್ ಹ್ಯಾಮ್‌ಗೆ ತೆರಳಲಿದೆ. ಆಗಸ್ಟ್ 15 ರಂದು ತಂಡವು ತಮ್ಮ ಅಧಿಕಾರಿಗಳೊಂದಿಗೆ ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಅದೇ ದಿನ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಭಾರತ ಮಹಿಳಾ ತಂಡ ಆಗಸ್ಟ್ 17ರಂದು ಬರ್ಮಿಂಗ್ ಹ್ಯಾಮ್ ನಲ್ಲಿ ಇಳಿಯಲಿದೆ. ಆಗಸ್ಟ್ 20 ರಂದು ಭಾರತೀಯ ಪುರುಷರ ಮತ್ತು ಮಹಿಳಾ ತಂಡಗಳು ತಮ್ಮ ಅಭಿಯಾನವನ್ನು ಆರಂಭಿಸಲಿದೆ. * ಮೊದಲ ಪಂದ್ಯದಲ್ಲಿ ಭಾರತ ಪುರುಷರ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಮಹಿಳಾ ತಂಡವು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.