* ನ್ಯೂಜಿಲೆಂಡ್‌ನ ವಿಶ್ವಖ್ಯಾತ ಶಾಟ್‌ಪಟ್‌ ಥ್ರೊ ಸ್ಪರ್ಧಿ 39 ವರ್ಷದ ವೆಲೇರಿ ಆ್ಯಡಮ್ಸ್ ಅವರನ್ನು ಏಪ್ರಿಲ್ 21 ರಂದು ನಡೆಯಲಿರುವ 16ನೇ ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು ಓಟದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. * ಆ್ಯಡಮ್ಸ್‌ ಅವರು 2008 (ಬೀಜಿಂಗ್) ಮತ್ತು 2012ರ (ಲಂಡನ್) ಒಲಿಂಪಿಕ್ಸ್‌ನಲ್ಲಿ ಮಹಿಳಾ ವಿಭಾಗದಲ್ಲಿ ಶಾಟ್‌ಪಟ್‌ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ರಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿಯ ಪದಕವನ್ನು ಮತ್ತು ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು 4 ಬಾರಿ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ.* ವೆಲೇರಿ ಅವರು ವಿಶ್ವ ಯುವ ಜೂನಿಯರ್ ಮತ್ತು ಸೀನಿಯರ್ ಮಟ್ಟದಲ್ಲಿ ವಿಶ್ವ ಚಾಂಪಿಯನ್ ಪಟ್ಟಕೇರಿದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* 2014ರಲ್ಲಿ ಅಂತಾರಾಷ್ಟ್ರೀಯ ಅಮೆಚೂರ್ ಅಥ್ಲೆಟ್ ಫೆಡರೇಷನ್ ವೆಲೇರಿ ಅವರಿಗೆ ವಿಶ್ವ ವರ್ಷದ ಅಥ್ಲೆಟ್ ಗೌರವ ಪ್ರಧಾನ ಮಾಡಿತ್ತು.