* ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯ ಪಂದ್ಯವೊಂದರಲ್ಲಿ ಭಾರತೀಯ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ಅವರು 74 ರನ್‌ಗಳ ಅಮೂಲ್ಯ ಇನ್ನಿಂಗ್ಸ್‌ ಆಡುವ ಮೂಲಕ ಹಲವಾರು ಪ್ರಮುಖ ಮೈಲಿಗಲ್ಲುಗಳನ್ನು ಸ್ಥಾಪಿಸಿದರು.* ಈ ಇನ್ನಿಂಗ್ಸ್‌ನ ವೇಳೆ, ವಿರಾಟ್ ಕೊಹ್ಲಿ ಅವರು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ (2nd Highest Run-Scorer in ODIs) ಏರಿದರು.* ಈ ಸಾಧನೆಯ ಮೂಲಕ ಅವರು ಶ್ರೀಲಂಕಾದ ಮಾಜಿ ನಾಯಕ ಮತ್ತು ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕರ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು. ಸಂಗಕ್ಕರ ಅವರು 404 ಪಂದ್ಯಗಳಲ್ಲಿ 14,234 ರನ್‌ಗಳನ್ನು ಗಳಿಸಿದ್ದರು.* ಕೊಹ್ಲಿ ಅವರು ಈ ಪಂದ್ಯದಲ್ಲಿ ತಮ್ಮ 54ನೇ ರನ್ ಗಳಿಸಿದಾಗ ಈ ಐತಿಹಾಸಿಕ ದಾಖಲೆ ನಿರ್ಮಾಣವಾಯಿತು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕ್ರಿಕೆಟ್ ದೇವರು ಎಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ (463 ಪಂದ್ಯಗಳಲ್ಲಿ 18,426 ರನ್‌ಗಳು) ಇದ್ದಾರೆ. ಕೊಹ್ಲಿ ಈಗ ಸಚಿನ್ ನಂತರದ ಅತಿ ಹೆಚ್ಚು ರನ್ ಗಳಿಸಿದ ಆಟಗರರಾಗಿದ್ದಾರೆ.* ವಿರಾಟ್ ಕೊಹ್ಲಿ 305ಪಂದ್ಯಗಳಲ್ಲಿ 14,255 ರನ್‌ಗಳು,. ಕುಮಾರ ಸಂಗಕ್ಕರ 404 ಪಂದ್ಯಗಳಲ್ಲಿ14,234ರನ್‌ಗಳು, ಸನತ್ ಜಯಸೂರ್ಯ 445 ಪಂದ್ಯಗಳಲ್ಲಿ 13,430 ರನ್‌ಗಳು ಅತಿ ಹೆಚ್ಚು ರನ್ ಗಳಿಸಿದ ಆಟಗರರಾಗಿದ್ದಾರೆ.* ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಇನ್ನೊಂದು ಮಹತ್ವದ ದಾಖಲೆ ನಿರ್ಮಿಸಿದರು. ಅವರು ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ ಕೇವಲ 2500 ಏಕದಿನ ಇನಿಂಗ್ಸ್‌ಗಳಲ್ಲಿ 6000 ರನ್‌ಗಳನ್ನು ಗಳಿಸಿದ ವಿಶ್ವದ ಅತಿ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಈ ಸಾಧನೆಯು ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಇಷ್ಟು ಕಡಿಮೆ ಪಂದ್ಯಗಳಲ್ಲಿ (305) ಈ ಸಾಧನೆ ಮಾಡಿರುವುದು, ಕ್ರಿಕೆಟ್‌ನ ಆಧುನಿಕ ಯುಗದಲ್ಲಿ ಅವರ ಆಟದ ಉತ್ಕೃಷ್ಟತೆ ಮತ್ತು ಸ್ಥಿರತೆಯನ್ನು ಸಾಬೀತುಪಡಿಸುತ್ತದೆ. ವಿಶ್ವಕಪ್‌ಗಳು ಮತ್ತು ಪ್ರಮುಖ ಸರಣಿಗಳ ಸನ್ನಾಹದಲ್ಲಿ ಈ ದಾಖಲೆ, ತಂಡಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಮತ್ತಷ್ಟು ಬಲಪಡಿಸಿದೆ.