* ಮೃತ ಕುರಿಯ ಸಸ್ತನಿ ಗ್ರಂಥಿಯಿಂದ ತದ್ರೂಪು ಕುರಿಯ ಜನನಕ್ಕೆ ಕಾರಣವಾದ ಕ್ಲೋನಿಂಗ್‌ ತಂತ್ರಜ್ಞಾನವನ್ನು ಮೊದಲ ಬಾರಿಗೆ ಪ್ರಯೋಗಿಸಿ ಡಾಲಿ ಎಂಬ ಕುರಿಯ ಜನನಕ್ಕೆ ಕಾರಣವಾದ ವಿಜ್ಞಾನಿ ಪ್ರೊ. ಸರ್ ಐಯಾನ್ ವಿಲ್ಮಟ್‌ (79) ಅವರು ನಿಧನರಾಗಿದ್ದಾರೆ.* ಕ್ಲೋನಿಂಗ್‌ ಕ್ಷೇತ್ರದಲ್ಲಿನ ಇವರ ನಿರಂತರ ಸಂಶೋಧನೆಯ ಫಲವಾಗಿ 1996ರಲ್ಲಿ ಡಾಲಿ ಎಂಬ ತದ್ರೂಪು ಕುರಿ ಜನನ ಮೃತ ಕುರಿಯ ಗ್ರಂಥಿಯಲ್ಲಿನ ಕೋಶವೇ ಮೂಲವಾಗಿತ್ತು.* ಎಡಿನ್‌ಬರ್ಗ್‌ನಲ್ಲಿದ್ದ ರೋಸ್ತಿನ್‌ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ ಸರ್ ವಿಲ್ಕಟ್ ಅವರು, ಆಯಸ್ಸು ಹೆಚ್ಚಿಸುವ ಔಷಧಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು.* ಇದರಿಂದಾಗಿ ಡಿಎನ್‌ಎ ಮುಂದೆ ಭ್ರೂಣವಾಗಿ ಪರಿವರ್ತನೆಯಾಯಿತು. ನಂತರ ಅದನ್ನು ಬಾಡಿಗೆ ತಾಯಿ (ಮತ್ತೊಂದು ಕುರಿ) ಯ ಗರ್ಭಕ್ಕೆ ಸೇರಿಸಲಾಗಿತ್ತು. 20ನೇ ಶತಮಾನದ ಅತಿ ದೊಡ್ಡ ಆವಿಷ್ಕಾರ ಎಂದು ಬಣ್ಣಿಸಲಾಗಿತ್ತು.