* ನೊಬೆಲ್ ಪ್ರಶಸ್ತಿಯ ಪ್ರತಿಷ್ಠಾನವು ಈ ವರ್ಷದಿಂದ ಅನ್ವಯವಾಗುವಂತೆ ನೊಬೆಲ್ ಪ್ರಶಸ್ತಿಯ ಬಹುಮಾನದ ಮೊತ್ತವನ್ನು 8.18 ಕೋಟಿಗೆ ಹೆಚ್ಚಿಸಿದೆ. * ಸ್ವೀಡಿಷ್ ಕರೆನ್ಸಿ ಇತ್ತೀಚೆಗೆ ಕುಸಿದಿರುವುದರಿಂದ ಈ ವರ್ಷದ ನೊಬೆಲ್ ಪ್ರಶಸ್ತಿಗಳ ಪ್ರಶಸ್ತಿ ಮೊತ್ತವನ್ನು 1 ಮಿಲಿಯನ್ ಕ್ರೋನರ್ (USD 90,000) ನಿಂದ 11 ಮಿಲಿಯನ್ ಕ್ರೋನರ್ (USD 986,270) ಗೆ ಏರಿಸುವುದಾಗಿ ನೊಬೆಲ್ ಫೌಂಡೇಶನ್ ಸೆಪ್ಟೆಂಬರ್ 15 ರಂದು ತಿಳಿಸಿದೆ.* 2017 ರಲ್ಲಿ ಬಹುಮಾನದ ಮೊತ್ತವನ್ನು 8 ಮಿಲಿಯನ್ ಕ್ರೋನರ್‌ನಿಂದ 9 ಮಿಲಿಯನ್ ಕ್ರೋನರ್‌ಗೆ ಹೆಚ್ಚಿಸಲಾಯಿತು. 2020 ರಲ್ಲಿ ಬಹುಮಾನದ ಮೊತ್ತವನ್ನು 10 ಮಿಲಿಯನ್ ಕ್ರೋನರ್‌ಗೆ ಹೆಚ್ಚಿಸಲಾಯಿತು.* ನೊಬೆಲ್ ಪ್ರಶಸ್ತಿಯ ಪ್ರತಿಷ್ಠಾನವು ಆರ್ಥಿಕವಾಗಿ ಸಬಲವಾಗಿರುವ ಕಾರಣ ಬಹುಮಾನ ಮೊತ್ತ ಏರಿಸಲು ನಿರ್ಧರಿಸಲಾಗಿದೆ.