* ವಿದೇಶೀ ವಿನಿಮಯ ದೇಶದ ವಿದೇಶಿ ವಿನಿಮಯ ಮೀಸಲು(ಫಾರೆಕ್ಸ್) ಸಂಗ್ರಹದಲ್ಲಿ ಸತತ ಎರಡನೇ ವಾರವೂ ಏರಿಕೆಯಾಗಿದ್ದು, ನವೆಂಬರ್ 24ಕ್ಕೆ ಕೊನೆಗೊಳ್ಳುವ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹದಲ್ಲಿ 2.53 ಶತಕೋಟಿ ಡಾಲರ್ ಹೆಚ್ಚಳವಾಗಿದೆ. * ರಿಸರ್ವ್ ಬ್ಯಾಂಕ್ ಅಂಕಿ-ಅಂಶಗಳ ಪ್ರಕಾರ, ವಿದೇಶಿ ವಿನಿಮಯ ಮೀಸಲು ಈ ಏರಿಕೆಯೊಂದಿಗೆ 597.39 ಶತಕೋಟಿ ಡಾಲರ್‌ಗಳಿಗೆ ತಲುಪಿದೆ. ಇದು ಕಳೆದ ವಾರ 595.39 ಶತಕೋಟಿ ಡಾಲರ್‌ಗಳಷ್ಟಿತ್ತು. * ಮೀಸಲಿನಲ್ಲಿ ಪ್ರಮುಖ ಭಾಗವಾದ ವಿದೇಶಿ ಕರೆನ್ಸಿ ಆಸ್ತಿಯು ವಿನಿಮಯ ಸಂಗ್ರಹವು ನವೆಂಬರ್ 24ರ ಹೊತ್ತಿಗೆ 2.14 ಶತಕೋಟಿ ಡಾಲರ್ ಏರಿಕೆಯಾಗಿದ್ದು, 528.53 ಶತಕೋಟಿ ಡಾಲರ್‌ಗೆ ಮುಟ್ಟಿದೆ. ಕಳೆದ ಎರಡು ವಾರಗಳಲ್ಲಿ ವಿದೇಶಿ ವಿನಿಮಯ ಸಂಗ್ರಹದಲ್ಲಿ ಸುಮಾರು 7.50 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಳವಾಗಿದೆ.