* 2022ರ ಹಣಕಾಸು ವರ್ಷದ ಮಟ್ಟಕ್ಕೆ ಹೋಲಿಸಿದರೆ ಭಾರತದ ವಾರ್ಷಿಕ ವಿದ್ಯುತ್ ಬಳಕೆ ಭಾರಿ ಏರಿಕೆ ಭಾರತದ ಒಟ್ಟು ವಾರ್ಷಿಕ ವಿದ್ಯುತ್ ಬಳಕೆ 1,300 ಶತಕ ಐಟಿ ಕಿಲೋವ್ಯಾಟ್ ರಷ್ಟಾಗಿದೆ.* 2012ಕ್ಕೆ ಹೋಲಿಸಿದರೆ ಶೇಕಡ 70 ಏರಿಕೆ ಕಂಡಿದ್ದು, ವಿದ್ಯುತ್ ವಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಸಂಶೋಧನೆ ನಡೆಸುವ 'ಪ್ರಯಾಸ್‌' ಸಂಸ್ಥೆಯ ವಿಶ್ಲೇಷಣೆ ಇದನ್ನು ದಾಖಲಿಸಿದೆ. ಕೈಗಾರಿಕೆ ಮತ್ತು ಗೃಹ ಬಳಕೆ ವಿಭಾಗಗಳು ಕೇಂದ್ರ ಈ ಬೆಳವಣಿಗೆ ಹೇಗೆ ಮುಖ್ಯ ಕಾರಣ ಎಂಬುದನ್ನು ವಿಶ್ಲೇಷಣೆ ತೋರಿಸಿದೆ. * 2012- 2022ರ ಅವಧಿಯಲ್ಲಿನ ಹೆಚ್ಚುವರಿ ಬೇಡಿಕೆಯಲ್ಲಿ ಕೈಗಾರಿಕಾ ಕ್ಷೇತ್ರದ ಪಾಲು ಶೇಕಡ 39, ಗೃಹ ಬಳಕೆದಾರರ ಪಾಲು ಶೇ. 32 ಹಾಗೂ ಕೃಷಿ ವಲಯದ ಪಾಲು ಶೇ. 16 ಆಗಿದೆ. ಎಂಬುದು ವಿಶ್ಲೇಷಣೆಯಿಂದ ಗೊತ್ತಾಗಿದೆ.* 5 ರಾಜ್ಯಗಳದ್ದೇ ಶೇ. 50 ಪಾಲು 2022ರಲ್ಲಿ ಕೈಗಾರಿಕಾ ವಲಯ ಬಳಸಿದ ಒಟ್ಟು ವಿದ್ಯುಚ್ಛಕ್ತಿಯಲ್ಲಿ ಐದು ಅಗ್ರ ರಾಜ್ಯಗಳಾದ ಗುಜರಾತ್, ಒಡಿಶಾ, ಮಹಾರಾಷ್ಟ್ರ, ತಮಿಳು ನಾಡು ಮತ್ತು ಛತ್ತೀಸ್‌ಗಢದ ಪಾಲೇ ಶೇಕಡ 50ರಷ್ಟಾಗಿದೆ.* ಸರಾಸರಿ ಗೃಹ ಬಳಕೆಯಲ್ಲಿ ಗೋವಾ ಮುಂಚೂಣಿ ಸ್ಥಾನದಲ್ಲಿದೆ. ಅಸ್ಸಾಂನಲ್ಲಿ ಬಳಸುವ ಮಾಸಿಕ 48.5 ಕಿಲೋವ್ಯಾಟ್‌ಗಿಂತ ಐದು ಪಟ್ಟು ಹೆಚ್ಚು, ಅಂದರೆ 267,3 ಕಿಲೋವ್ಯಾಟ್ ವಿದ್ಯುತ್ತನ್ನು ಅಲ್ಲಿ ಬಳಸಲಾಗುತ್ತದೆ.* ಒಡಿಶಾದ ವಾರ್ಷಿಕ ಬಳಕೆ 32 ಬಿಯುನಿಂದ 82 ಬಿಯುಗೆ ಏರಿದ್ದು 50 ಬಿಯು ಏರಿಕೆಯಾಗಿದೆ.  ಬಳಕೆಯಲ್ಲಿ ಭಾಗ ಮಾಡಿದಾಗ ಬಿಹಾರದಲ್ಲಿ ತೀವ್ರ ಏರಿಕೆಯಾಗಿದೆ. 6 ಬಿಯುನಿಂದ 27 ಬಿಯು ಆಗಿದ್ದು ಶೇ. 350ರಷ್ಟು ಏರಿಕೆ ದಾಖಲಾಗಿದೆ.