*ಏಷ್ಯಾದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳ ಬಗ್ಗೆ ಬ್ರಿಟನ್ ಮೂಲದ ಕ್ವಾಕರೆಲಿ ಸೈಮಂಡ್ಸ್ (ಕ್ಯು) ಸಂಸ್ಥೆಯು ವರದಿ ನೀಡಿದ್ದು,  2024ನೇ ಸಾಲಿನ ಏಷ್ಯಾದ ಅತ್ಯುತ್ತಮ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ.  ಭಾರತದ ಒಟ್ಟು 148 ವಿಶ್ವವಿದ್ಯಾಲಯಗಳು ಸ್ಥಾನ ಪಡೆದುಕೊಂಡಿವೆ.*ರ‍್ಯಾಂಕಿಂಗ್ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) 58ನೇ ಬ್ಯಾಂಕ್ ಪಡೆದಿದೆ. * ಬಾಂಬೆಯ ಭಾರತೀಯ ವಿಜ್ಞಾನ ಸಂಸ್ಥೆ ದಕ್ಷಿಣ ಏಷ್ಯದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಏಷ್ಯಾದಿಂದ ಸುಮಾರು 280ಕ್ಕೂ ಅಧಿಕ ವಿಶ್ವವಿದ್ಯಾಲಯಗಳನ್ನು ರ‍್ಯಾಂಕಿಂಗ್ ಗೆ ಒಳಪಡಿಸಲಾಗಿದೆ.