* ಜೀವವೈವಿಧ್ಯತೆ ಅಧ್ಯಯನಕ್ಕಾಗಿ ಇತ್ತೀಚಿಗೆ ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಚಿಲ್ಲಾ ವಲಯದಲ್ಲಿ ಅಪರೂಪದ "ಹಾಗ್ ಜಿಂಕೆ" ಇರುವಿಕೆ ಪತ್ತೆಯಾಗಿದೆ ಎಂದು ಸಂರಕ್ಷಿತಾರಣ್ಯದ ನಿರ್ದೇಶಕ ಸಾಕೇತ್ ಬಡೋಲಾ ತಿಳಿಸಿದ್ದಾರೆ. * ಇಂತಹ ಅಪರೂಪದ ಪ್ರಾಣಿ ಇಲ್ಲಿ ಕಂಡು ಬರಲು ಅರಣ್ಯ ಹಾಗೂ ಜೀವವೈವಿಧ್ಯತೆ ಸಂರಕ್ಷಣಗೆ ನಾವು ಕೈಗೊಂಡಿರುವ ಸಾಕಷ್ಟು ಕ್ರಮಗಳೇ ಕಾರಣ ಎಂದು  ಸಾಕೇತ್ ಬಡೋಲಾ ಸಂತಸ ವ್ಯಕ್ತಪಡಿಸಿದ್ದಾರೆ.* ಅಳಿವಿನಂಚಿನ ಪ್ರಾಣಿ ಎಂದು ಗುರುತಿಸಲಾದ ಹಾಗ್ ಜಿಂಕೆ ಹತ್ತಿರದ ಅರಣ್ಯದಿಂದ ಸ್ಥಳಾಂತರಗೊಂಡಿರಬಹುದು. ಇತ್ತೀಚಿನ ದಿನಗಳಲ್ಲಿ ಹಾಗ್ ಜಿಂಕೆಗಳು ಕಂಡು ಬರುವುದೇ ಅಪರೂಪ ಎಂದು ಸಾಕೇತ್ ಮಾಹಿತಿ ನೀಡಿದ್ದಾರೆ.*  ಭೂತಾನ್, ನೇಪಾಳ, ಪಾಕಿಸ್ತಾನ ಹಾಗೂ ಭಾರತದ ಉತ್ತರ, ವಾಯವ್ಯ ಭಾಗದ ಪರ್ವತಾರಣ್ಯಗಳು ಹಾಗ್ ಜಿಂಕೆಗಳ ನೈಸರ್ಗಿಕ ಆವಾಸಸ್ಥಾನವಾಗಿವೆ. ಇದಕ್ಕೆ ಸಾಮಾನ್ಯವಾಗಿ ಆಡುಭಾಷೆಯಲ್ಲಿ ಹಂದಿ ಜಿಂಕೆ ಎಂದೂ ಕರೆಯುತ್ತಾರೆ.