Job Description: ➤ ಜೂನ್ 23 ರಂದು ವಿಶ್ವಾದ್ಯಂತ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನವನ್ನು (United Nations Public Service Day 2026) ಆಚರಿಸಲಾಗುತ್ತದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊಡುಗೆಯನ್ನು ಗೌರವಿಸಲು ಹಾಗೂ ಯುವ ಪೀಳಿಗೆಯನ್ನು ನಾಗರಿಕ ಸೇವೆಗಳತ್ತ ಆಕರ್ಷಿಸಲು ಈ ದಿನ ಅತ್ಯಂತ ಪ್ರಮುಖವಾಗಿದೆ. ➤ ಈ ವರ್ಷದ ಘೋಷವಾಕ್ಯ 2026ರ ಥೀಮ್: " ಸಾರ್ವಜನಿಕ ಸಂಸ್ಥೆಗಳ ರೂಪಾಂತರ: ನಾವೀನ್ಯತೆ, ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು." (Transforming Public Institutions: Advancing innovation, Participation, and Inclusion) ➤ ಈ ವರ್ಷ ಜೂನ್ 23 ರಿಂದ 25 ರವರೆಗೆ ಜಾರ್ಜಿಯಾದ ಬಿಲಿಸಿ (Tbilisi, Georgia) ನಗರದಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ವೇದಿಕೆ (UN Public Service Forum) ಜಂಟಿಯಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ➤ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (UN General Assembly) ಡಿಸೆಂಬರ್ 20, 2002 ರಂದು 57/277 ರ ನಿರ್ಣಯವನ್ನು ಅಂಗೀಕರಿಸುವ ಮೂಲಕ ಪ್ರತಿ ವರ್ಷ ಜೂನ್ 23 ರನ್ನು ವಿಶ್ವ ಸಂಸ್ಥೆಯ ಸಾರ್ವಜನಿಕ ಸೇವಾ ದಿನವನ್ನಾಗಿ ಘೋಷಿಸಿತು.ಈ ನಿರ್ಣಯದ ಅನ್ವಯ 2003 ರ ಜೂನ್ 23 ರಂದು ಮೊದಲ ಬಾರಿಗೆ ಈ ದಿನವನ್ನು ಅಧಿಕೃತವಾಗಿ ಆಚರಿಸಲಾಯಿತು. ➤ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿಗಳು (UNPSA): ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಅತ್ಯುತ್ತಮ ಮತ್ತು ನಾವೀನ್ಯತಾ ಕಾರ್ಯಗಳನ್ನು ಪ್ರದರ್ಶಿಸುವ ಜಾಗತಿಕ ಸಂಸ್ಥೆಗಳಿಗೆ ವಿಶ್ವಸಂಸ್ಥೆಯು ಪ್ರತಿ ವರ್ಷ "United Nations Public Service Awards (UNPSA)" ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDG 16) ತಲುಪಲು ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತವನ್ನು ಉತ್ತೇಜಿಸುವ ಸಂಸ್ಥೆಗಳಿಗೆ ಈ ಗೌರವ ಸಂದಾಯವಾಗುತ್ತದೆ. ➤ ಭಾರತದಲ್ಲಿ ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು (National Civil Services Day) ಪ್ರತಿ ವರ್ಷ ಏಪ್ರಿಲ್ 21 ರಂದು ಆಚರಿಸಲಾಗುತ್ತದೆ. ಆದರೆ ಜೂನ್ 23 ರಂದು ಆಚರಿಸಲಾಗುವುದು ಅಂತರರಾಷ್ಟ್ರೀಯ/ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನವಾಗಿದೆ. ಪರೀಕ್ಷೆಯಲ್ಲಿ ಗೊಂದಲ ಮಾಡಿಕೊಳ್ಳಬೇಡಿ.ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.