* ಟ್ವಿಟ್ಟರ್ಗೆ ಹೊಸ ಸಿಇಒ ಆಗಿ ಲಿಂಡಾ ಯಾಕರಿನೊ ಅವರು ಆಯ್ಕೆಯಾಗಿದ್ದಾರೆ.  ಅವರನ್ನು ನೂತನ ಸಿಇಒ ಆಗಿ ಸ್ವಾಗತಿಸಲು ಇಷ್ಟಪಡುತ್ತೇನೆ ಎಂದು ಎಲಾನ್ ಮಸ್ಕ್ ಅವರು ಇದೀಗ  ಟ್ವೀಟ್ ಮಾಡಿದ್ದಾರೆ.* ಮಸ್ಕ್ ಅವರು ನಾನು ಪ್ರಾಡಕ್ಟ್, ಹೊಸ ತಂತ್ರಜ್ಞಾನಗಳ ಬಗ್ಗೆ ಗಮನಹರಿಸಲಿದ್ದೇನೆ. ಆ್ಯಪ್ಗಾಗಿ ಅವರ ಜತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.* ಆದಾಯ ತರಲು ವಿವಿಧ ಪ್ರಯತ್ನ ಮಾಡುತ್ತಿರುವ ಮಸ್ಕ್, ಬ್ಲೂ ಟಿಕ್ ಮಾರ್ಕ್ಗೆ ಸಬ್ಸ್ಕ್ರಿಪ್ಷನ್ ಶುಲ್ಕ ನಿಗದಿ ಮಾಡುವುದು ಸೇರಿದಂತೆ ಹಲವು ಕ್ರಮ ಕೈಗೊಂಡಿದ್ದಾರೆ.