* ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್‌(Morne Morkel) ಟೀಮ್‌ ಇಂಡಿಯಾದ (Team India) ನೂತನ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. * ಹಂಗಾಮಿ ಬೌಲಿಂಗ್‌ ಕೋಚ್‌ ಆಗಿ ಸಾಯಿರಾಜ್ ಬಹುತುಳೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಇದೀಗ ನೂತನ ಬೌಲಿಂಗ್‌ ಕೋಚ್‌ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್‌ ನೇಮಕವಾಗಿದ್ದಾರೆ. * ಈ ಹಿಂದೆ ಮಾರ್ಕೆಲ್‌ ಪಾಕಿಸ್ತಾನ ಕ್ರಿಕೆಟ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ನೇಮಕವಾಗಿದ್ದರು.  ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಆಡಿದ ಸಾಕಷ್ಟು ಅನುಭವ ಮಾರ್ನೆ ಅವರಿಗಿದೆ. * ಮಾರ್ಕೆಲ್ ಸೆಪ್ಟೆಂಬರ್ 01ರಿಂದ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಾರ್ಕೆಲ್ ಅವರು ಈವರೆಗೂ 86 ಟೆಸ್ಟ್‌, 117 ಏಕದಿನ ಕ್ರಿಕೆಟ್‌ ಹಾಗೂ 44 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 544 ವಿಕೆಟ್‌ಗಳನ್ನು ಪಡೆದಿದ್ದಾರೆ.ಟೀಮ್‌ ಇಂಡಿಯಾದ ನೂತನ ಬೌಲಿಂಗ್‌ ಕೋಚ್‌ ಆಗಿ ಮಾರ್ನೆ ಮಾರ್ಕೆಲ್‌ ನೇಮಕ