* ಡಿಸೇಂಬರ್ 3 ರಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿನಡೆದ ಟಿ20 ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಿದೆ.  * ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ರೋಚಕ ಜಯ ಒಲಿಸಿಕೊಂಡಿತು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಭಾರತ 2-1ರಿಂದ ಗೆದ್ದಿದೆ.* ರೋಹಿತ್‌, ಆಸೀಸ್‌ ದೈತ್ಯರನ್ನು ಬ್ಯಾಟಿಂಗ್‌ಗೆ ಇಳಿಸಿದರು. ಆಸೀಸ್‌ ಓಪನರ್‌ ಕ್ಯಾಮರೂನ್ ಗ್ರೀನ್ ಅವರು 21ಎಸೆತಗಳಲ್ಲಿ 52 ರನ್‌ ಸಿಡಿಸಿ ಪವರ್‌ಪ್ಲೇಯಲ್ಲಿ ಭಾರತಕ್ಕೆ ಭಾರಿ ಹೊಡೆತ ನೀಡಿದರು. * ಮಧ್ಯಮ ಓವರ್‌ಗಳಲಿ ತುಸು ಕುಸಿದ ಕಾಂಗರೂಗಳಿಗೆ ಮತ್ತೆ ಬೂಸ್ಟ್‌ ಕೊಟ್ಟಿದ್ದು ಡೇವಿಡ್. ಸ್ಲಾಗ್ ಓವರ್‌ಗಳಲ್ಲಿ ಟಿಮ್ ಡೇವಿಡ್ ಅವರು 27 ಎಸೆತಗಳಲ್ಲಿ ಗಳಿಸಿದ 54 ರನ್‌ ಆಸ್ಟ್ರೇಲಿಯ ರನ್‌ ಹೆಚ್ಚಿಸಲು ಸಹಾಯಕವಾಯ್ತು.