* ವಿಶ್ವಸಂಸ್ಥೆಯ 'ಸಿಒಪಿ 28' ಹವಾಮಾನ ಶೃಂಗಸಭೆಯಲ್ಲಿ ಯೂರೋಪಿಯನ್ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವೊನ್ ಡೆರ್ ಲೆಯನ್ ಅವರು ಡಿಸೇಂಬರ್ 1 ರಂದು ಅವರು, ಗುರಿ ಹೊಂದಲು 116 ರಾಷ್ಟ್ರಗಳು ಸಹಮತ ಹೊಂದಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.* ಉಲ್ಲೇಖಿತ ಗುರಿ ಕುರಿತ ಚರ್ಚೆಗಳು ಪ್ರತ್ಯೇಕವಾಗಿದ್ದರೂ ಪರಸ್ಪರ ಸಂಬಂಧವಿದೆ. ಅಂತಿಮವಾಗಿ COP 28 ಅಂತಿಮ ಒಪ್ಪಂದವು ಎಲ್ಲ ಪ್ರಕಾರದ ಪಳೆಯುಳಿಕೆ ಇಂಧನದ ಬಳಕೆಯನ್ನು ಕುಗ್ಗಿಸುವುದು ಅಥವಾ ಕೈಬಿಡುವುದರ ಕುರಿತಂತೆ ದೇಶಗಳಿಗೆ ಬದ್ಧತೆಯನ್ನು ನಿಗದಿಪಡಿಸಲಿದೆ ಎಂದು ಅಭಿಪ್ರಾಯಪಟ್ಟರು.* ಜಾಗತಿಕವಾಗಿ, ಹಸಿರುಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣದಲ್ಲಿ ಜಿ 20 ದೇಶಗಳ ಪಾಲು ಶೇ 80ರಷ್ಟಿದೆ.* ಸಿಒಪಿ ಕುರಿತ ಅಂತಿಮ ನಿರ್ಧಾರದಲ್ಲಿ ಈ ಗುರಿ ಸೇರ್ಪಡೆಗೊಳಿಸಲು ಎಲ್ಲ ರಾಷ್ಟ್ರಗಳಿಗೆ ನಾನು ಕೋರುತ್ತೇನೆ. ಇಂಥ ಕ್ರಮವು ಹೂಡಿಕೆದಾರರು ಮತ್ತು ಬಳಕೆದಾರರಿಗೆ ಸ್ಪಷ್ಟ ಸಂದೇಶ ರವಾನಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.