* ಪಿಟೀಲು ನುಡಿಸುವುದರಲ್ಲಿ ಅಪೂರ್ವ ಸಾಧನೆಗೈದು ಪಿಟೀಲು ಚೌಡಯ್ಯ ಎಂದೇ ಖ್ಯಾತಿಯಾಗಿರುವ ಕರ್ನಾಟಕದ ಹೆಮ್ಮೆಯ ಶ್ರೇಷ್ಠ ಪಿಟೀಲು ವಾದಕರಾದ ಚೌಡಯ್ಯನವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಲಾಗುವುದು.* ವಾದ್ಯ ಸಂಗೀತದಲ್ಲಿ (ಕರ್ನಾಟಕ ಮತ್ತು ಹಿಂದೂಸ್ಥಾನಿ) ಅನುಪಮ ಸೇವೆ ಸಲ್ಲಿಸಿರುವ ರಾಷ್ಟ್ರಮಟ್ಟದ ಹಿರಿಯ ಕಲಾವಿದರಿಗೆ ನೀಡಲಾಗುವ ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 10.00 ಲಕ್ಷ(ಹತ್ತು ಲಕ್ಷ ರೂಪಾಯಿ)ಗಳ ನಗದನ್ನು ನೀಡಿ ಗೌರವಿಸಲಾಗುತ್ತದೆ. * ಇದುವರೆಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದುಕೊಂಡಿದ್ದಾರೆ. ಡಾ|| ವೀಣಾ ದೊರೆಸ್ವಾಮಿ ಅಯ್ಯಂಗಾರ್, ಉಸ್ತಾದ್ ಬಿಸ್ಮಿಲ್ಲಾಖಾನ್ , ಡಾ|| ರಾಜೀವ್ ತಾರಾನಾಥ್, ಕುನ್ನಕ್ಕುಡಿ ಆರ್. ವೈದ್ಯ ನಾಥನ್, ಪ್ರಶಸ್ತಿ ಪವರ ಪಂಡಿತ್ ಶ್ರೀ ಉಸ್ತಾದ್ ಅಲ್ಲಾರಖ, ಟಿ.ಕೆ. ಮೂರ್ತಿ, ಶ್ರೀ ಆರ್.ಕೆ. ಬಿಜಾಪುರ, ಲಾಲ್ಗುಡಿ ಬಿ. ಜಯರಾಮನ್, ಪಂಡಿತ್ ಶ್ರೀ ಜಿ.ಆರ್.ನಿಂಬರಗಿ, ಡಾ||ಎನ್. ರಮಣಿ, ದತ್ತಾತ್ರೇಯ ಸದಾಶಿವ ಗರುಡ, ವೆಲ್ಲೂರು ಜಿ, ರಾಮವರ್ಧನ್, ಡಾ|| ಪುಟ್ಟರಾಜ ಗವಾಯಿಗಳು, ಮುಂತಾದವರು ಪ್ರಶಸ್ತಿಯನ್ನು ಪಡೆದಿದ್ದಾರೆ.