* ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ವಿಜೇತ ಭಾರತೀಯ ಟೆನ್ನಿಸಿಗ ಲಿಯಾಂಡರ್ ಪೇಸ್ ಆಟಗಾರರ ವಿಭಾಗದಲ್ಲಿ ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್‌ಗೆ (ಐಟಿಹೆಚ್ ಎಫ್) ನಾಮನಿರ್ದೇಶನಗೊಂಡ ಏಷ್ಯಾದ ಮೊದಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ* ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್‌ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಚೀನಾದ ಆಟಗಾರ್ತಿ ಲಿ ನಾ, 2019 ರಲ್ಲಿ ITHFಗೆ ನಾಮನಿರ್ದೇಶನಗೊಂಡ ಮೊದಲ ಏಷ್ಯನ್ ಆಟಗಾರ್ತಿಯಾಗಿದ್ದಾರೆ. * 2024 ರ ಆವೃತ್ತಿಗೆ ಸೆಪ್ಟೆಂಬರ್ 26 ರಂದು ಘೋಷಿಸಲಾದ ಆರು ಆಟಗಾರರ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು, ಜೊತೆಗೆ ಕಾರಾ ಬ್ಲ್ಯಾಕ್ , ಅನಾ ಇವನೊವಿಕ್ , ಕಾರ್ಲೋಸ್ ಮೊಯಾ , ಡೇನಿಯಲ್ ನೆಸ್ಟರ್ ಮತ್ತು ಫ್ಲಾವಿಯಾ ಪೆನ್ನೆಟ್ಟಾ ಅವರೊಂದಿಗೆ ಸ್ಪರ್ದಿಸಲಿದ್ದಾರೆ.