* ಸ್ಟಾರ್ಟ್‌ಅಪ್ ಜಿನೋಮಿ ಸ್ಕೇಲ್ ಅಪ್ ವರದಿಯ ಮೊದಲ ಆವೃತ್ತಿಯಲ್ಲಿ ವಿಶ್ವದಲ್ಲಿ ಅತೀಹೆಚ್ಚು ಸ್ಟಾರ್ಟ್ ಅಪ್ ಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿ ನೀಡಲಾಗಿದ್ದು ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ.*  ಅಮೆರಿಕ, ಚೀನಾ ಹಾಗೂ ಇಂಗ್ಲೆಂಡ್ ಈ ಪಟ್ಟಿಯಲ್ಲಿ ಭಾರತಕ್ಕಿಂತ ಮುಂದಿವೆ. ಆದರೆ, ಒಟ್ಟು ವೆಂಚರ್ ಕ್ಯಾಪಿಟಲ್ ಹೂಡಿಕೆಯಲ್ಲಿ ಭಾರತ ಇಂಗ್ಲೆಂಡ್ ಗಿಂತ ಮುಂದಿದೆ. * ಭಾರತದ ಸ್ಟಾರ್ಟ್ ಅಪ್ ಗಳು 50 ಮಿಲಿಯನ್ ಡಾಲರ್ ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆ ಪಡೆದಿವೆ ಎಂದು ವರದಿ ತಿಳಿಸಿದೆ. * ಭಾರತದ 429 ಸ್ಟಾರ್ಟ್ ಅಪ್ ಗಳು 127 ಬಿಲಿಯನ್ ಡಾಲರ್ ವಿಸಿ ಹೂಡಿಕೆ ಜೊತೆಗೆ ಒಟ್ಟು  446 ಬಿಲಿಯನ್ ಡಾಲರ್ ಮೌಲ್ಯದ ಟೆಕ್ ಹೂಡಿಕೆಯನ್ನು ಕೂಡ ಪಡೆದಿವೆ.