* ಇತ್ತೀಚೆಗೆ ಮಾಲ್ಡೀವ್ಸ್ ದೇಶವು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಇತಿಹಾಸ ಸೃಷ್ಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮಾಲ್ಡೀವ್ಸ್‌ಗೆ 'ತಾಯಿಯಿಂದ ಮಗುವಿಗೆ ಸೋಂಕು ಹರಡುವುದರ ತ್ರಿವಳಿ ನಿರ್ಮೂಲನೆ' (Triple Elimination of Mother-to-Child Transmission - MTCT) ಮಾನ್ಯತೆಯನ್ನು ನೀಡಿದೆ.* ಏನಿದು ತ್ರಿವಳಿ ನಿರ್ಮೂಲನೆ? ಮಾಲ್ಡೀವ್ಸ್ ಮೂರು ಪ್ರಮುಖ ಸೋಂಕುಗಳಾದ ಹೆಪಟೈಟಿಸ್ ಬಿ (Hepatitis B), ಎಚ್‌ಐವಿ (HIV), ಮತ್ತು ಸಿಫಿಲಿಸ್ (Syphilis) ಗಳನ್ನು ತಾಯಂದಿರಿಂದ ನವಜಾತ ಶಿಶುಗಳಿಗೆ ಹರಡುವುದನ್ನು ಯಶಸ್ವಿಯಾಗಿ ತಡೆದಿದೆ. ಈ ಮೂರೂ ಸೋಂಕುಗಳನ್ನು ಏಕಕಾಲದಲ್ಲಿ ನಿರ್ಮೂಲನೆ ಮಾಡಿದ ವಿಶ್ವದ ಮೊದಲ ದೇಶ ಮಾಲ್ಡೀವ್ಸ್ ಆಗಿದೆ.* ಸಾರ್ವತ್ರಿಕ ಆರೋಗ್ಯ ಸೇವೆ: ಗರ್ಭಿಣಿಯರಿಗೆ ಎಚ್‌ಐವಿ, ಸಿಫಿಲಿಸ್ ಮತ್ತು ಹೆಪಟೈಟಿಸ್ ಬಿ ಪರೀಕ್ಷೆಗಳನ್ನು ಶೇ. 95 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮಾಡಲಾಗಿದೆ.* ಹೆಪಟೈಟಿಸ್ ಬಿ ಲಸಿಕೆ: ಶೇ. 95 ಕ್ಕಿಂತ ಹೆಚ್ಚು ನವಜಾತ ಶಿಶುಗಳಿಗೆ ಜನನದ 24 ಗಂಟೆಯೊಳಗೆ ಹೆಪಟೈಟಿಸ್ ಬಿ ಲಸಿಕೆಯನ್ನು ನೀಡಲಾಗಿದೆ.* ದೃಢ ರಾಜಕೀಯ ಇಚ್ಛಾಶಕ್ತಿ: ಮಾತೃ ಮತ್ತು ಮಕ್ಕಳ ಆರೋಗ್ಯದ ಸುಧಾರಣೆಯಲ್ಲಿ ಸರ್ಕಾರದ sustained investment ಮಹತ್ವದ ಪಾತ್ರ ವಹಿಸಿದೆ.* ಮಾಲ್ಡೀವ್ಸ್ ಈಗಾಗಲೇ 2019 ರಲ್ಲಿ ಎಚ್‌ಐವಿ ಮತ್ತು ಸಿಫಿಲಿಸ್‌ನ ಎಂ.ಟಿ.ಸಿ.ಟಿ. ನಿರ್ಮೂಲನೆಯನ್ನು ಸಾಧಿಸಿತ್ತು. ಈಗ ಹೆಪಟೈಟಿಸ್ ಬಿ ಯ ಪ್ರಸರಣವನ್ನೂ ತಡೆಯುವ ಮೂಲಕ 'ತ್ರಿವಳಿ ನಿರ್ಮೂಲನೆ' ಗುರಿಯನ್ನು ತಲುಪಿದೆ.* ಈ ಸಾಧನೆಯು ಮಾತೃತ್ವ ಮತ್ತು ಮಕ್ಕಳ ಆರೋಗ್ಯದಲ್ಲಿನ ಮಹತ್ವದ ಜಾಗತಿಕ ಮೈಲಿಗಲ್ಲಾಗಿದ್ದು, ಬಲಿಷ್ಠ ಆರೋಗ್ಯ ವ್ಯವಸ್ಥೆಗಳ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿರ್ಮೂಲನೆ ಮಾಡಬಹುದೆಂಬುದಕ್ಕೆ ಮಾಲ್ಡೀವ್ಸ್ ಒಂದು ಪ್ರಬಲ ಉದಾಹರಣೆಯಾಗಿದೆ.