* ಥೈಲ್ಯಾಂಡ್‌ನ ನೂತನ ಪ್ರಧಾನಿಯಾಗಿ 37 ವರ್ಷ ಪೇಟೊಂಗ್ಟಾರ್ನ್ ಶಿನವತ್ರಾ ಅವರನ್ನು ಥೈಲ್ಯಾಂಡ್‌ನ ಸಂಸತ್ತು ಆಗಸ್ಟ್ 16 ರಂದು ಆಯ್ಕೆ ಮಾಡಲಾಗಿದೆ. * ಶಿನವತ್ರಾ ಅವರು ಕುಟುಂಬ ಸದಸ್ಯರಲ್ಲಿ ಪ್ರಧಾನಿ ಹುದ್ದೆಗೆ ಏರಿದ 3ನೇ ಸದಸ್ಯೆಯಾಗಿ­ದ್ದಾರೆ. ಸಂವಿಧಾನ ಉಲ್ಲಂಘನೆಯ ಕಾರಣಕ್ಕೆ 2 ದಿನಗಳ ಹಿಂದೆಯಷ್ಟೇ ಥೈಲ್ಯಾಂಡ್ ಪ್ರಧಾನಿ ಶ್ರೆತ್ತಾ ಥಾವಿಸಿನ್ ಅವರನ್ನು ಥೈಲ್ಯಾಂಡ್‌ನ ಸಂವಿಧಾನಿಕ ನ್ಯಾಯಾಲಯ ಅಧಿಕಾರದಿಂದ ಪದಚ್ಯುತಗೊಳಿಸಿತ್ತು. * ನೂತನ ಪ್ರಧಾನಿ ಪೇಟೊಂಗ್ಟಾರ್ನ್ ಶಿನವತ್ರಾ  ಅವರು ಥೈಲ್ಯಾಂಡ್‌ನ ಮಾಜಿ ಪ್ರಧಾನಿ ತಕ್ಸಿನ್ ಶಿನವತ್ರಾ ಅವರ ಪುತ್ರಿಯಾಗಿದ್ದಾರೆ. ಪೇಟೊಂಗ್ಟಾರ್ನ್ ಶಿನವತ್ರಾ ಅವರು ಥೈಲ್ಯಾಂಡ್‌ನಲ್ಲಿ ಅಧಿಕಾರದಲ್ಲಿರುವ ಫ್ಯೂ ಥಾಯ್ ಪಕ್ಷದ ನಾಯಕಿಯಾಗಿದ್ದಾರೆ.* ಪೇಟೊಂಗ್ಟಾರ್ನ್ ಶಿನವತ್ರಾ ಅವರ ತಂದೆ ತಕ್ಸಿನ್ ಶಿನವತ್ರಾ ಅವರ ವಿರುದ್ಧ ದೇಶ ಭ್ರಷ್ಟದ ಆರೋಪ ಹೊರಿಸಲಾಗಿತ್ತು. ಇನ್ನು ಪೇಟೊಂಗ್ಟಾರ್ನ್ ಶಿನವತ್ರಾ ಅವರ ಅತ್ತೆ ಯಿಂಗ್ಲಕ್ ಶಿನವತ್ರಾ ಕೂಡ ದೇಶಭ್ರಷ್ಟದ ಆರೋಪ ಹೊತ್ತು ಪದತ್ಯಾಗ ಮಾಡಿದ್ದರು. ಈಗ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಪೇಟೊಂಗ್ಟಾರ್ನ್ ಶಿನವತ್ರಾ ಥೈಲ್ಯಾಂಡ್‌ನ 2ನೇ ಮಹಿಳಾ ಪ್ರಧಾನಮಂತ್ರಿಯಾಗಿದ್ದಾರೆ. * ಶಿನವತ್ರಾ ಅವರು ಥಾಯ್ಲೆಂಡ್‌ನ 31 ನೇ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಪೇಟೊಂಗ್‌ಟಾರ್ನ್‌ಗೆ 319 ಮತಗಳು, ವಿರುದ್ಧ 145 ಮತಗಳು ಮತ್ತು 27 ಗೈರು ಹಾಜರಾಗಿದ್ದರು.