* ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ (NAL) ರಕ್ಷಣಾ ತಂತ್ರಜ್ಞಾನದಲ್ಲಿ ಒಂದು ಅದ್ಭುತ ಬೆಳವಣಿಗೆಯನ್ನು ಅನಾವರಣಗೊಳಿಸಿದೆ.* ಇದು ಅತ್ಯಂತ ಅಪಾಯಕಾರಿ ಡ್ರೋನ್ ಆಗಿದ್ದು ಎದುರಾಳಿಯನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡು ಸ್ಫೋಟಗೊಳ್ಳುವ ಆತ್ಮಾಹುತಿ ಬಾಂಬರ್ ಆಗಿದೆ.* ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಇಂಥ ಡ್ರೋನ್ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. * ಡ್ರೋನ್ಗಳು ಇನ್ನು ಭಾರತದ ಸೇನೆಯನ್ನೂ ಸೇರಲಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಸಹಸಂಸ್ಥೆಯಾಗಿರುವ ಎನ್‌ಎಎಲ್ 1959ರಲ್ಲಿ ಸ್ಥಾಪನೆಯಾಗಿದ್ದು. * ದೇಶದ ನಾಗರಿಕ ವಲಯದಲ್ಲಿ ಕಾರ್ಯ ನಿರ್ವಹಿಸುವ ಏಕೈಕ ವೈಮಾನಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವಾಗಿದೆ. ಸ್ವದೇಶಿ ನಿರ್ಮಿತ ಎಂಜಿನ್‌ಗಳನ್ನು ಹೊಂದಿದ್ದು 1,000 ಕಿಲೋಮೀಟರ್‌ಗಳವರೆಗೆ ಹಾರುವ ಸಾಮರ್ಥ್ಯವನ್ನು ಹೊಂದಿವೆ.