* ಭಾರತದ ತಾರಾ ಜಾವೆಲಿನ್ ಎಸೆತಗಾರ, ಕರ್ನಾಟಕದ ಡಿ.ಪಿ.ಮನು ತೈವಾನ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. * ತೈವಾನ್ ಓಪನ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಡಿಪಿ ಮನು ಚಿನ್ನ ಗೆದ್ದಿದ್ದಾರೆ ಮನು 78.32 ಮೀ ಎಸೆತದೊಂದಿಗೆ ಪ್ರಾರಂಭಿಸಿದರೆ, ಅವರ ಎರಡನೇ ಪ್ರಯತ್ನವು 76.80 ಮೀ ಅಳತೆಯಾಗಿದೆ. * ತೈಪೆಯಲ್ಲಿ ಜೂನ್ 01 ರಂದು (ಶನಿವಾರ) ನಡೆದ ತೈವಾನ್‌ ಓಪನ್‌ 2024ರ ಪುರುಷರ ಜಾವೆಲಿನ್‌ ಎಸೆತದಲ್ಲಿ ಭಾರತದ ಡಿಪಿ ಮನು ಅವರು 81.58 ಮೀಟರ್‌ ದೂರ ಎಸೆದು ಚಿನ್ನದ ಪದಕ ಪಡೆದರು.* ತೈವಾನ್ ಆಟಗಾರ ಹುವಾಂಗ್ ಚಾವೊ-ಹಂಗ್ ಅವರು 71.24 ಮೀಟರ್ ಜಾವೆಲಿನ್ ಥ್ರೋ ಹಾಕುವುದರ ಮೂಲಕ ಕಂಚಿನ ಪದಕ ಪಡೆದುಕೊಂಡರು.* ಏಪ್ರಿಲ್ನಲ್ಲಿ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-1 ಅನ್ನು ಗೆದ್ದಿದ್ದರು. ನಂತರ ಕಳೆದ ತಿಂಗಳು ಫೆಡರೇಶನ್ ಕಪ್‌ನಲ್ಲಿ ನೀರಜ್ ಚೋಪ್ರಾ ಅವರು ಎರಡನೇ ಸ್ಥಾನಕ್ಕೆ ಪಡೆದುಕೊಂಡು. ಹಾಗೂ ಕನ್ನಡಿಗ ಮನು ಅವರು ಈ ವರ್ಷದ 3ನೇ ಸ್ಥಾನ ಪಡೆದಿದ್ದಾರೆ.