* ಕೇಂದ್ರ ಸರ್ಕಾರವು ಸುಡಾನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ದೇಶಕ್ಕೆ ಕರೆತರುವ ಉದ್ದೇಶದಿಂದ  'ಆಪರೇಷನ್ ಕಾವೇರಿ' ಕಾರ್ಯಾಚರಣೆಗೆ ಏಪ್ರಿಲ್ 24 ರಂದು ಚಾಲನೆ ನೀಡಿದ್ದು, 278 ಜನರನ್ನು ನೌಕಾಪಡೆಯ 'INS ಸುಮೇಧ' ನೌಕೆಯ ಪೋರ್ಟ್ ಸೂಡಾನ್ ನಿಂದ ಜಿದ್ದಾಗೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. * ಸುಡಾನ್ ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಅಮೇರಿಕ ಮತ್ತು ಸೌದಿ ಅರೇಬಿಯಾ ಮದ್ಯಸ್ಥಿಕೆಯಿಂದಾಗಿ ಮೂರು ದಿನಗಳ ಕದನ ವಿರಾಮ ಘೋಷಣೆಯಾಗಿದ್ದು, ಪ್ರಜೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಪಡೆದುಕೊಳ್ಳಲು, ಅರೋಗ್ಯ ಸುಧಾರಿಸಿಕೊಳ್ಳಲು ಹಾಗೂ ರಾಜತಾಂತ್ರಿಕರ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಲು ಈ ಕದನ ವಿರಾಮಘೋಷಿಸಲಾಯಿತ್ತು.