* ನವದೆಹಲಿಯಲ್ಲಿ ನಡೆದ ಇತ್ತೀಚಿನ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷರಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಮೇ 16 ರಂದು (ಗುರುವಾರ) ಆಯ್ಕೆಯಾಗಿದ್ದಾರೆ. * ಸಿಬಲ್ ಅವರು ಇತ್ತೀಚಿನ ಚುನಾವಣೆಯಲ್ಲಿ1,066 ಮತಗಳನ್ನು ಪಡೆದರು ಮತ್ತು ಸಮೀಪದ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ ಅವರನ್ನು 689 ಮತಗಳನ್ನು ಪಡೆದರು.* ಸಿಬಲ್ ಅವರು 2001-02ರಲ್ಲಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA)  ಅಧ್ಯಕ್ಷರಾಗಿ ಕೊನೆಯ ಬಾರಿ ಸೇವೆ ಸಲ್ಲಿಸಿದ್ದರು. * ಹಾರ್ವರ್ಡ್ ಕಾನೂನು ಶಾಲೆಯ ಪದವೀಧರರಾದ ಸಿಬಲ್ ಅವರು 1989-90ರ ಅವಧಿಯಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು. ಅವರನ್ನು 1983 ರಲ್ಲಿ ಹಿರಿಯ ವಕೀಲರಾಗಿ ನೇಮಿಸಲಾಯಿತು.* ಸಿಬಲ್ ಅವರು ಎಸ್‌ಸಿಬಿಎ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇದು ನಾಲ್ಕನೇ ಬಾರಿಯಾಗಿದ್ದು, ಸಿಬಲ್ ಜೊತೆ ಉಪಾಧ್ಯಕ್ಷರಾಗಿ ರಚನಾ ಶ್ರೀವಾಸ್ತವ್ ಅವರು ಮತ್ತು ಕಾರ್ಯದರ್ಶಿಯಾಗಿ ವಿಕ್ರಾಂತ್ ಯಾದವ್ ಅವರು ಆಯ್ಕೆಯಾಗಿದ್ದಾರೆ.