* ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಹಿರಿಯ ಅಧಿಕಾರಿಗಳಾದ ಎ ವೈ ವಿ ಕೃಷ್ಣ ಮತ್ತು ಎನ್ ವೇಣು ಗೋಪಾಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. * ಐಪಿಎಸ್) ಹಿರಿಯ ಅಧಿಕಾರಿಗಳು 1995ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಗಳಾಗಿದ್ದು, ಎ.ವೈ.ವಿ. ಕೃಷ್ಣ ಅವರು(ಅಸ್ಸಾಂ-ಮೇಘಾಲಯ ಕೇಡರ್) ಪ್ರಸ್ತುತ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಲ್ಲಿ(ಸಿಆರ್‌ಪಿಎಫ್) ಮಹಾ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ವೇಣುಗೋಪಾಲ್ ಅವರು(ಹಿಮಾಚಲ ಪ್ರದೇಶ ಕೇಡರ್) ಪ್ರಸ್ತುತ ಸಿಬಿಐನ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.* ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ ಹೆಚ್ಚುವರಿ ನಿರ್ದೇಶಕರಾಗಿ ಅವರ ಅಧಿಕಾರಾವಧಿಯು ಆಗಸ್ಟ್ 6, 2028 ರವರೆಗೆ ವಿಸ್ತರಿಸುತ್ತದೆ.* ಸಿಬ್ಬಂದಿ ಸಚಿವಾಲಯ ಹೊರಡಿಸಿದ ಮತ್ತೊಂದು ಆದೇಶದ ಪ್ರಕಾರ ಹೆಚ್ಚುವರಿ ನಿರ್ದೇಶಕರಾಗಿ ಅವರ ನೇಮಕವು ಮೇ 24, 2027 ರವರೆಗೆ ಜಾರಿಯಲ್ಲಿರುತ್ತದೆ.