* ಭಾರತದ ಫುಟ್ಬಾಲ್ ದಿಗ್ಗಜ ಸುನಿಲ್ ಛೆಟ್ರಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಕುವೈತ್ ವಿರುದ್ಧ ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗುವುದಾಗಿ ಛೆಟ್ರಿ ಅವರು ತಿಳಿಸಿದ್ದಾರೆ. * 39 ವರ್ಷ ವಯಸ್ಸಿನ ಸುನಿಲ್ ಛೆಟ್ರಿ ಅವರು ಭಾರತದ ಪರ 150 ಪಂದ್ಯಗಳನ್ನು ಆಡಿದ್ದು, ಈ ವೇಳೆ 94 ಗೋಲುಗಳನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ಇತಿಹಾಸದಲ್ಲಿ ಅತಿಹೆಚ್ಚು ಗೋಲು ಗಳಿಸಿದವರ ಆಟಗಾರರ ಪಟ್ಟಿಯಲ್ಲಿ ಚೆಟ್ರಿ ಅವರು 4ನೇ ಸ್ಥಾನದಲ್ಲಿದ್ದಾರೆ.* ಐ-ಲೀಗ್ (2014, 2016), ಐಎಸ್‌ಎಲ್ (2019), ಮತ್ತು ಸೂಪರ್ ಕಪ್ (2018) ನಂತಹ ಟ್ರೋಫಿಗಳನ್ನು ಗಳಿಸಿದ್ದಾರೆ. ಚೆಟ್ರಿ ಅವರು 2016 ರಲ್ಲಿ ಎಎಫ್‌ಸಿ ಕಪ್ ಫೈನಲ್‌ಗೆ ಅವರನ್ನು ಮುನ್ನಡೆಸಿದರು.* ಛೆಟ್ರಿ ಅವರು ನೆಹರು ಕಪ್ (2007, 2009, 2012) ಮತ್ತು SAFF ಚಾಂಪಿಯನ್‌ಶಿಪ್ (2011, 2015, 2021) ನಲ್ಲಿ ಭಾರತದ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.