Job Description: * ಕೇಂದ್ರ ಸರ್ಕಾರ ಏಪ್ರಿಲ್ 24 ರಿಂದ ಕಾರ್ಯಾಚರಣೆ ಆರಂಭಿಸಿದೆ, ಕಾರಣ ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ಸಂಘರ್ಷದಿಂದ ಸಂಕಷ್ಟಕ್ಕೆ ಸಿಲುಕಿರುವ ಮೂರು ಸಾವಿರಕ್ಕೂ ಹೆಚ್ಚು ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಸಾಗಿಸುವ ಕಾರ್ಯಕ್ಕೆ 'ಆಪರೇಷನ್ ಕಾವೇರಿ' ಎಂದು ಹೆಸರಿಟ್ಟಿದೆ.* ಭಾರತೀಯರನ್ನು ಸಂಕಷ್ಟದಿಂದ ಮತ್ತೆ ತಾಯ್ತಾಡಿಗೆ ಕರೆತರಲು ಎರಡು ವಿಮಾನಗಳು ಮತ್ತು ಒಂದು ಹಡಗು ಸಿದ್ಧಗೊಂಡಿದೆ. ಈಗಾಗಲೇ, 500 ಭಾರತೀಯರು ಸುಡಾನ್ ಬಂದರು ತಲುಪಿದ್ದಾರೆ. * ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಎರಡು ವಿಮಾನಗಳು ಸಜ್ಜಾಗಿವೆ. ಭಾರತೀಯ ನೌಕಾ ಪಡೆಗೆ ಸೇರಿದ INS ಸುಮೇಧ ಹಡಗು ಸುಡಾನ್ ಬಂದರು ತಲುಪಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.* ಸೇನಾ ಮುಖ್ಯಸ್ಥ ಜನರಲ್ ಅಬ್ದುಲ್ ಫತ್ತಾಹ್ ಅಲ್ ಬುಹಾನ್ ಹಾಗೂ ಅರೆಸೇನಾ ಪಡೆ ಮುಖ್ಯಸ್ಥ ಮೊಹಮ್ಮದ್ ಹಮದಾನ್ ದಾಗಲೊ ನಡುವೆ ನಡೆಯುತ್ತಿರುವ ಸಂಘರ್ಷ 11ನೇ ದಿನಕ್ಕೆ ಕಾಲಿಟ್ಟಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ, ಸಂಘರ್ಷದಲ್ಲಿ ಒಂಬತ್ತು ಮಕ್ಕಳು ಮೃತಪಟ್ಟಿದ್ದು, 50 ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿಸುಬಂದಿದೆ.