* ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರು ಶ್ರೀಲಂಕಾ ದೇಶದ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಜುಲೈ 8 ರಂದು ನೇಮಕಗೊಂಡಿದ್ದಾರೆ.* ಪ್ರಸ್ತುತ ಎಸ್‌ಎಲ್‌ಸಿಯ ಕ್ರಿಕೆಟ್ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಜಯಸೂರ್ಯ ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹೊಸ ಕೆಲಸವನ್ನು ವಹಿಸಿಕೊಳ್ಳಲಿದ್ದಾರೆ.* ಪ್ರವಾಸಿ ಭಾರತ ತಂಡದ ವಿರುದ್ಧ ಜುಲೈ 27 ರಂದು ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಜತೆಗೆ ತಾತ್ಕಾಲಿಕವಾಗಿ ಅವಧಿಗೆ ಶ್ರೀಲಂಕಾ ತಂಡದ ಹಂಗಾಮಿ ಮುಖ್ಯಕೋಚ್ ಆಗಿ ನೇಮಕಗೊಡ್ಡಿದ್ದಾರೆ.* ನಿರ್ಗಮಿತ ಕೋಚ್ ಕ್ರಿಸ್ ಸಿಲ್ವರ್ ವುಡ್ ಅವರಿಂದ ತೆರವಾಗಿರುವ ಸ್ಥಾನವನ್ನು ಜಯಸೂರ್ಯ ತುಂಬಲಿದ್ದಾರೆ ಎಂದು ಶ್ರೀಲಂಕಾದ ಕ್ರಿಕೆಟ್ ಮಂಡಳಿ ತಿಳಿಸಿದೆ.* ವಿಶ್ವಕಪ್ ನಲ್ಲಿ ತಂಡದ ಸಲಹೆಗಾರರಾಗಿದ್ದ  ಜಯಸೂರ್ಯ ಅವರು ಮುಖ್ಯ ಆಯ್ಕೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. * ಆಗಸ್ಟ್ - ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡಿನಲ್ಲಿ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿಯವರೆಗೂ ಜಯಸೂರ್ಯ ಅವರು ಹಂಗಾಮಿ ಕೋಚ್ ಆಗಿ ಮುಂದುವರಿಸಲಿದ್ದಾರೆ.