Job Description: * 2001ರಲ್ಲಿ ನಡೆದಿದ್ದ ಉಗ್ರ ದಾಳಿಯ 22ನೇ ವರ್ಷಾಚರಣೆಯ ದಿನವೇ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ಪ್ರೇಕ್ಷಕರ ಗ್ಯಾಲರಿಯಿಂದ ಕೆಳಗೆ ಧುಮುಕಿದ ಇಬ್ಬರು ಯುವಕರು ಸಂಸದರು ಕುಳಿತುಕೊಳ್ಳುವ ಚೇರ್‌ಗಳ ಕಡೆಗೆ ನುಗ್ಗಿ ಬಣ್ಣದ ಹೊಗೆ ಬರುವ ವಸ್ತುಗಳನ್ನು ಸಿಡಿಸಿದ್ದಾರೆ. ಇದೇ ವೇಳೆ ಸಂಸತ್‌ನ ಹೊರಗೆ ಓರ್ವ ಯುವಕ ಹಾಗೂ ಓರ್ವ ಅಪರಿಚಿತ ಯುವತಿ ಕೂಡಾ ಬಣ್ಣದ ಹೊಗೆ ಸಿಡಿಸಿ ಘೋಷಣೆ ಕೂಗಿದ್ದಾರೆ. * ಸಂಸತ್ ಒಳಗಿದ್ದ ಇಬ್ಬರು ವ್ಯಕ್ತಿಗಳನ್ನು ಸಾಗರ್ ಶರ್ಮಾ ಮತ್ತು ಮೈಸೂರಿನ ಡಿ ಮನೋರಂಜನ್ ಎಂದು ಗುರುತಿಸಲಾಗಿದೆ. ಅವರನ್ನು ಸಂಸದರು ಹಿಡಿದು ಥಳಿಸಿದ್ದಾರೆ. ಸಂಸತ್ ಹೊರಗೆ ಘೋಷಣೆ ಕೂಗಿದ ಪುರುಷ ಮತ್ತು ಮಹಿಳೆಯನ್ನು ಮಹಾರಾಷ್ಟ್ರದ ಲಾತೂರ್‌ ಅಮೋಲ್ ಶಿಂಧೆ ಮತ್ತು ಹರಿಯಾಣದ ಹಿಸಾರ್‌ ನೀಲಂ ದೇವಿ ಎಂದು ಹೆಸರಿಸಲಾಗಿದೆ.* ಸಾಗರ್ ಶರ್ಮಾ ಮತ್ತು ಮನೋರಂಜನ್ ಸಂದರ್ಶಕರ ಪಾಸ್‌ಗಳನ್ನು ಹೊಂದಿದ್ದರು, ಅದನ್ನು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯ ಮನವಿಯ ಮೇರೆಗೆ ನೀಡಲಾಗಿದೆ. ಪ್ರತಾಪ್ ಸಿಂಹ ಅವರು ತಮ್ಮ ಅಭಿಪ್ರಾಯವನ್ನು ವಿವರಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.* ಸಂಸದರ ರಕ್ಷಣೆಗೆ ಇದೆ ‘ಸಂಸತ್ ಭದ್ರತಾ ಸೇವೆ’ ಇದು ಕೇವಲ ಸಂಸತ್‌ ಭವನದ ರಕ್ಷಣೆಗೆಂದೇ ಇರುವ ಸಮಿತಿ.