* ಶಿಕ್ಷಣ ಮತ್ತು ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಸಂಬಾಲ್‌ಪುರದಲ್ಲಿ ದೇಶದ ಮೊದಲ ಕೌಶಲ ಭಾರತ ಕೇಂದ್ರ (ಎಸ್‌ಐಸಿ)ವನ್ನು ಫೆಬ್ರುವರಿ 21 ರಂದು ಉದ್ಘಾಟಿಸಿದರು.* ಎಲ್ಲಾ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಒಂದೇ ವೇದಿಕೆಯಲ್ಲಿ ತರಲು ಈ ಅತ್ಯಾಧುನಿಕ ಡಿಜಿಟಲ್ ವೇದಿಕೆ ಸಹಕಾರಿಯಾಗಲಿದೆ.* 2015ರ ಜುಲೈ 15ರಂದು ಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನದಂದು MSDE (ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ) ಸ್ಕಿಲ್ ಇಂಡಿಯಾ ಅಭಿಯಾನವನ್ನು ಆರಂಭಿಸಿತು. * ದೇಶದ ಯುವಕರಿಗೆ ತಮ್ಮಲ್ಲಿರುವ ಯಾವುದೇ ಕೌಶಲ್ಯದ ಮೂಲಕ ಉದ್ಯೋಗ ಪಡೆಯುವ ಅವಕಾಶಗಳನ್ನು ಸೃಷ್ಟಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.* ಕೇಂದ್ರ ಸರ್ಕಾರವು "ಡಿಜಿಟಲ್ ಇಂಡಿಯಾ", "ಮೇಕ್ ಇನ್ ಇಂಡಿಯಾ"ದಂತಹ ಅನೇಕ ಯೋಜನೆಗಳನ್ನು ಆರಂಭಿಸಲಾಗಿದೆ. ಈ ಎಲ್ಲ ಯೋಜನೆಗಳ ಏಕೈಕ ಉದ್ದೇಶವೆಂದರೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು. ಇದೇ ಮಾದರಿಯಲ್ಲಿ ದೇಶದ ಯುವಕರಿಗೆ ತರಬೇತಿ ನೀಡಲು ಸ್ಕಿಲ್ ಇಂಡಿಯಾ ಅಭಿಯಾನ ಆರಂಭಿಸಲಾಗಿದೆ. * ಸಚಿವರು 'ಕೌಶಲ ರಥ' ಉಪಕ್ರಮವನ್ನು ಆರಂಭಿಸಿದ್ದರು. ಬಸ್‌ಗಳ ಮೂಲಕ ಒಡಿಶಾದ ಸಂಬಾಲ್‌ಪುರ, ಅಂಗುಲ್ ಮತ್ತು ದಿಯೋರ್ಗ ಜಿಲ್ಲೆಗಳಾದ್ಯಂತ ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಕೌಶಲ ತರಬೇತಿಯನ್ನು ನೀಡಲು ವಿನ್ಯಾಸಗೊಳಿಸಲಾದ ಯೋಜನೆ ಇದಾಗಿತ್ತು. * ಇದರ ಮೂಲಕ ನಾಲ್ಕು ಸಾವಿರ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಈ ಮೂಲಕ ಡಿಜಿಟಲ್ 5 ಸಾಕ್ಷರತೆ, ಉದ್ಯಮಶೀಲತೆ ಕೌಶಲಗಳನ್ನು ಉತ್ತೇಜಿಸಲಾಗಿದೆ.* ಕೆಲಸದ ವಿಶಿಷ್ಟ ಸಂಯೋಜನೆಯೊಂದಿಗೆ ವಿದ್ಯಾರ್ಥಿಗಳಿಗೆ ಅವಶ್ಯಕ ಕೌಶಲಗಳನ್ನು ಕಲಿಸಲಾಗುತ್ತದೆ. ಮುಂದೆ ಅಂಗುಲ್, ಭದ್ರಕ್, ಧೆಂಕನಲ್, ತಾಕ್ಟರ್ ಮತ್ತು ದಿಯೋಘರ್‌ನಲ್ಲೂ ಸ್ಕಿಲ್ ಇಂಡಿಯಾ ಕೇಂದ್ರಗಳನ್ನು ತೆರೆಯಲು ಯೋಜಿಸಲಾಗಿದೆ.*  2022 ರ ವೇಳೆಗೆ ದೇಶದ ಸುಮಾರು 40 ಕೋಟಿ ಯುವಕರಿಗೆ ಅವರ ಆಯ್ಕೆಯ ವೃತ್ತಿಯಲ್ಲಿ ತರಬೇತಿ ನೀಡುವ ಮೂಲಕ ಉದ್ಯೋಗವನ್ನು ಒದಗಿಸುವುದು ಈ ಅಭಿಯಾನದ ಉದ್ದೇಶವಾಗಿದೆ.* ಸಾಂಪ್ರದಾಯಿಕ ಉದ್ಯೋಗಗಳಾದ ಪ್ಲಂಬರ್, ಎಲೆಕ್ಟ್ರಿಷಿಯನ್, ಫ್ಯಾಶನ್ ಡಿಸೈನರ್, ಸೋಲಾರ್ ಪ್ಲಾಂಟ್, ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್, ಮಾರ್ಕೆಟಿಂಗ್ ಸ್ಕಿಲ್, ಚಮ್ಮಾರ, ಕಮ್ಮಾರ, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಇತ್ಯಾದಿ ತರಬೇತಿ ನೀಡಲಾಗುತ್ತದೆ. ಸುಲಭವಾಗಿ ಅಥವಾ ಈ ಕೆಲಸಗಳಿಗೆ ಸಂಬಂಧಿಸಿದ ಉದ್ಯಮವನ್ನು ಪ್ರಾರಂಭಿಸಬಹುದು.